ವಾಣಿಜ್ಯ

ಸಂಸದೀಯ ಸಮಿತಿ ಪ್ರಶ್ನೆಗೆ ಆರ್‌ಬಿಐ ಗವರ್ನರ್ ಉತ್ತರ: ಬ್ಯಾಂಕಿಂಗ್ ಕ್ಷೇತ್ರ ಬಲವರ್ಧನೆಗೆ ಕ್ರಮದ ಭರವಸೆ

Raghavendra Adiga
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಮಂಗಳವಾರ ಸಂಸದೀಯ ಸಮಿತಿ ಮುಂದೆ ಹಾಜರಾಗಿ ಬ್ಯಾಂಕ್ ವಂಚನೆ ಪ್ರಕರಣ ಸೇರಿ ಹಲವು ಪ್ರಶ್ನೆಗಳನ್ನು ಎದುರಿಸಿದ್ದಾರೆ. ಇದೇ ವೇಳೆ ಬ್ಯಾಂಕಿಂಗ್ ಕ್ಷೇತ್ರದ ಬಲವರ್ಧನೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಭರವಸೆ ನಿಡಿದ್ದಾರೆ.
ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಗವರ್ನರ್ ಊರ್ಜಿತ್ ಪಟೇಲ್ ವಸೂಲಾಗದ ಸಾಲದ ಪ್ರಮಾಣ(ಎನ್‌ಪಿಎ)  ಬಿಕ್ಕಟ್ಟನ್ನು ಶೀಘ್ರವಾಗಿ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ  ನೇತೃತ್ವದಲ್ಲಿ ಸಮಿತಿಯಲ್ಲಿನ ಕೆಲ ಸದಸ್ಯರು ಇತ್ತೀಚೆಗೆ ಎಟಿಎಂಗಳಲ್ಲಿ ಹಣ ಕೊರತೆಯಾಗಿರುವ ಕಾರಣ ತಿಳಿಯಲು ಬಯಸಿದ್ದರು. ಜತೆಗೆ ಬ್ಯಾಂಕ್ ವಂಚನೆ ನಿಭಾವಣೆ ಸಂಬಂಧ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ ಏಕೆಂದು ಪ್ರಶ್ನಿಸಿದ್ದಾರೆ.
"ಬಿಕ್ಕಟ್ಟಿನ ನಿವಾರಣೆಗೆ ಸಂಬಂಧಿಸಿ ನಾವು ಶ್ರಮಿಸುತ್ತಿದ್ದೇವೆ. ಮತ್ತು ಶೀಘ್ರವಾಗಿ ಸಮಸ್ಯೆ ಪರಿಹಾರವಾಗುವುದೆಂದು ಭರವಸೆ ಹೊಂದಿದ್ದೇವೆ" ಊರ್ಜಿತ್ ಪಟೇಲ್ ಹೇಳಿದರು.
ದಿವಾಳಿತನ ಸಂಹಿತೆಯನ್ನು (ಐಬಿಸಿ) ಅನುಷ್ಠಾನಗೊಳಿಸಿದ ನಂತರ, ಎನ್ಪಿಎ  ಸಮಸ್ಯೆ ದೂರಾಗುತ್ತಿದೆ ಎಂದ ಪಟೇಲ್ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಸಮಿತಿಗೆ ಭರವಸೆ ನಿಡಿದ್ದಾರೆ. 
SCROLL FOR NEXT