ವಾಣಿಜ್ಯ

ಸಾಫ್ಟ್ ವೇರ್ ಸಮಸ್ಯೆ: 23 ಏರ್ ಇಂಡಿಯಾ ವಿಮಾನಗಳ ಹಾರಾಟ ವಿಳಂಬ

Lingaraj Badiger
ನವದೆಹಲಿ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸುಮಾರು ಎರಡು ಡಜನ್ ವಿಮಾನಗಳ ಹಾರಾಟ ವಿಳಂಬವಾಗಲಿದೆ ಎಂದು ಶನಿವಾರ ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಸಾಫ್ಟ್ ವೇರ್ ಸಮರ್ಪಕವಾಗಿ ಕಾರ್ಯಕರ್ನಿವಹಿಸದ ಹಿನ್ನೆಲೆಯಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವಿಳಂಬವಾಗಲಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ 2.30ರ ವರೆಗೆ ಸಾಫ್ಟ್ ವೇರ್ ಸಮಸ್ಯೆ ಉಂಟಾಗಿದ್ದರಿಂದ ಚೆಕ್ -ಇನ್ ಮತ್ತು ಇತರೆ ಸೇವೆಗಳನ್ನು ಕೈಯಾರೆ ನಿರ್ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಎಸ್ ಐಟಿಎ ಗ್ಲೋಬಲ್ ಏರ್ ಲೈನ್ಸ್ ಕಂಪನಿ ಏರ್ ಇಂಡಿಯಾಗೆ ಸಾಫ್ಟ್ ವೇರ್ ಸೇವೆ ಒದಗಿಸುತ್ತಿದ್ದು, ಚೆಕ್-ಇನ್, ಬೋರ್ಡಿಂಗ್ ಮತ್ತು ಬ್ಯಾಗೇಜ್ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ನಿಯಂತ್ರಿಸುತ್ತದೆ.
SCROLL FOR NEXT