ಸಾಂದರ್ಭಿಕ ಚಿತ್ರ 
ವಾಣಿಜ್ಯ

ಚೆನ್ನೈ; ಕನಿಷ್ಕ್ ಜ್ಯುವೆಲರಿಯಿಂದ 824 ಕೋಟಿ ರು. ವಂಚನೆ: ಸಿಬಿಐಗೆ ಎಸ್ ಬಿಐ ದೂರು

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಗಳಿಗೆ ಕೋಟ್ಯಾಂತರ ರುಪಾಯಿ ವಂಚಿಸುತ್ತಿರುವ ಮತ್ತೊಂದು ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು....

ಚೆನ್ನೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಗಳಿಗೆ ಕೋಟ್ಯಾಂತರ ರುಪಾಯಿ ವಂಚಿಸುತ್ತಿರುವ ಮತ್ತೊಂದು ಪ್ರಕರಣ ಬುಧವಾರ ಬೆಳಕಿಗೆ ಬಂದಿದ್ದು, ಚೆನ್ನೈ ಮೂಲದ ಕನಿಷ್ಕ್ ಗೋಲ್ಡ್ ಪ್ರೈ. ಲಿ.(ಕೆಜಿಪಿಎಲ್) ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ(ಎಸ್‍ಬಿಐ) ನೇತೃತ್ವದ 14 ಬ್ಯಾಂಕ್ ಗಳ ಒಕ್ಕೂಟಕ್ಕೆ ಒಟ್ಟು 824 ಕೋಟಿ. ರುಪಾಯಿ ವಂಚಿಸಿದೆ.
ಕೆಜಿಪಿಎಲ್ ನಿರ್ದೇಶಕ ಹಾಗೂ ಪ್ರವರ್ತಕರಾದ ಭೂಪೇಶ್ ಕುಮಾರ್ ಜೈನ್ ಮತ್ತು ಅವರ ಪತ್ನಿ ನೀತಾ ಜೈನ್ ಬ್ಯಾಂಕ್ ಗಳಿಗೆ ಸಾವಿರ ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ.
ದಂಪತಿಗಳು ರಾತ್ರೋ ರಾತ್ರಿ ತಮ್ಮ ಮಳಿಗೆಗಳಿಗೆ ಬಾಗಿಲು ಜಡಿದು, ದಾಖಲೆಗಳನ್ನು ಮಾಯ ಮಾಡಿದ್ದಾರೆ ಎಂದು ಎಸ್‌ಬಿಐ ಆರೋಪಿಸಿದೆ. 
ಈ ಸಂಬಂಧ ಎಸ್ ಬಿಐ ಸಿಬಿಐಗೆ ದೂರು ನೀಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದೆ. 
ಚೆನ್ನೈನ ಟಿ ನಗರದಲ್ಲಿ ಕನಿಷ್ಕ್ ರಿಜಿಸ್ಟರ್ಡ್ ಕಚೇರಿ ಇದ್ದು, ಭೂಪೇಶ್ ಕುಮಾರ್ ಜೈನ್ ಮತ್ತು ಅವರ ಪತ್ನಿ ನೀತಾ ಜೈನ್ ಇಬ್ಬರ ಸುಳಿವಿಲ್ಲ, ಬಹುಶಃ ಮಾರಿಷಶ್‌ಗೆ ಪರಾರಿಯಾಗಿರಬಹುದು ಎಂದು ಬ್ಯಾಂಕ್ ತಿಳಿಸಿದೆ. ಈ ಸಂಬಂಧ ಸಿಬಿಐ ಇನ್ನೂ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. 
ಒಟ್ಟು 14 ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಒಕ್ಕೂಟದ ನೇತೃತ್ವದಲ್ಲಿ ಕನಿಷ್ಕ್ ಗೋಲ್ಡ್ ಜ್ಯುವೆಲರಿಗೆ ಸಾಲ ನೀಡಲಾಗಿತ್ತು. ಜನವರಿ 25, 2018ರಲ್ಲಿ ಸಿಬಿಐಗೆ ನೀಡಿರುವ ದೂರಿನಲ್ಲಿ ಕನಿಷ್ಕ್ ರಾತ್ರೋರಾತ್ರಿ ತನ್ನ ಮಳಿಗೆಗಳನ್ನು ಮುಚ್ಚಿದ್ದು, ದಾಖಲೆಗಳನ್ನು ತಿರುಚಿದೆ ಎಂದು ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!