ವಾಣಿಜ್ಯ

ವಸ್ತುಗಳ ಅಂತಾರಾಜ್ಯ ಸಾಗಾಣಿಕೆಗೆ ಇ-ವೇ ಬಿಲ್ ವ್ಯವಸ್ಥೆ ಜಾರಿ

Sumana Upadhyaya

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಡಿ ಜಾರಿಗೆ ತರಲಾಗಿದ್ದ ಇ-ವೆ ಮಸೂದೆ (ಎಲೆಕ್ಟ್ರಾನಿಕ್ ವೇ)ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದಿದೆ.

ಭೂ, ವಾಯು ಮತ್ತು ಜಲ ಸಾರಿಗೆಗಳ ಮೂಲಕ 50,000 ರೂಪಾಯಿಗಳಿಗಿಂತ ಹೆಚ್ಚು ಬೆಲೆಬಾಳುವ ವಸ್ತುಗಳನ್ನು ಅಂತಾರಾಜ್ಯ ಮೂಲಕ ಸಾಗಾಣಿಕೆ ಮಾಡುವವರಿಗೆ ಎಲೆಕ್ಟ್ರಾನಿಕ್ ಬಿಲ್ ಅನ್ವಯವಾಗುತ್ತದೆ.

ಅಂತಾರಾಜ್ಯಗಳ ನಡುವೆ ಸರಕುಗಳ ಸಾಗಾಣಿಕೆಗೆ ಈ ಹೊಸ ವ್ಯವಸ್ಥೆ ಜಾರಿಗೆಯಾಗುತ್ತದೆ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ಹಮ್ಸುಖ್ ಆದಿಯಾ ತಿಳಿಸಿದ್ದರು.

ಸುಮಾರು 11 ಸಾವಿರ ಉದ್ಯಮಗಳು ಮತ್ತು ಸಾಗಾಣಿಕೆದಾರರು ಇ-ವೆ ಬಿಲ್ ಮೂಲಕ ದಾಖಲಾತಿ ಮಾಡಿಕೊಂಡಿದ್ದು ಇನ್ನಷ್ಟು ದಾಖಲಾತಿಗಳು ಕೊನೆ ಕ್ಷಣದಲ್ಲಿ ದಾಖಲಾತಿಯಾಗುವ ಸಾಧ್ಯತೆಯಿದೆ ಎಂದು ಜಿಎಸ್ ಟಿ ಜಾಲಸಂಪರ್ಕದ ಮುಖ್ಯ ಕಾರ್ಯನಿರ್ವಾಹಕ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.

ಹೊಸ ಜಿಎಸ್ ಟಿ ಆಡಳಿತದಡಿ ಸುಮಾರು 1.05 ಕೋಟಿ ಉದ್ಯಮಿಗಳು ದಾಖಲಾತಿ ಮಾಡಿಕೊಂಡಿದ್ದು ಅವುಗಳಲ್ಲಿ ಸುಮಾರು 70,00,000 ಆದಾಯ ತೆರಿಗೆ ಸಲ್ಲಿಸುತ್ತಿವೆ.

ಸರಕುಗಳು ತಲುಪಬೇಕಾದಲ್ಲಿಗೆ ತಲುಪದೆ ಮಧ್ಯದಲ್ಲಿ ಸಿಲುಕಿಕೊಂಡರೆ ಮತ್ತು ಸರಕುಗಳನ್ನು ಸಾಗಿಸುವಾಗ ಒಂದಕ್ಕಿಂತ ಹೆಚ್ಚು ಸಾಗಾಣಿಕೆದಾರರು ಭಾಗಿಯಾದರೆ ಏಕ ಇ-ವೇ ಬಿಲ್ ಅನ್ವಯವಾಗುತ್ತದೆ ಎಂದಿದ್ದರು.

SCROLL FOR NEXT