ಸಾಂದರ್ಭಿಕ ಚಿತ್ರ 
ವಾಣಿಜ್ಯ

ವಿಮಾನದಲ್ಲಿ ಮೊಬೈಲ್, ಇಂಟರ್ ನೆಟ್ ಬಳಕೆಗೆ ಟೆಲೆಕಾಂ ಆಯೋಗ ಒಪ್ಪಿಗೆ

ಆಕಾಶದಲ್ಲಿ ಹಾರುತ್ತಿರುವ ವಿಮಾನದಲ್ಲೂ ಮೊಬೈಲ್‌ ಮತ್ತು ಇಂಟರ್ ನೆಟ್‌ ಬಳಕೆಗೆ ಅವಕಾಶ ನೀಡಲು ಟೆಲೆಕಾಂ...

ನವದೆಹಲಿ: ಆಕಾಶದಲ್ಲಿ ಹಾರುತ್ತಿರುವ ವಿಮಾನದಲ್ಲೂ ಮೊಬೈಲ್‌ ಮತ್ತು ಇಂಟರ್ ನೆಟ್‌ ಬಳಕೆಗೆ ಅವಕಾಶ ನೀಡಲು ಟೆಲೆಕಾಂ ಆಯೋಗ ಮಂಗಳವಾರ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ನಡೆದ ಟೆಲೆಕಾಂ ಆಯೋಗದ ಸಭೆಯಲ್ಲಿ ವಿಮಾನದಲ್ಲಿ ಗ್ರಾಹಕರಿಗೆ ಮೊಬೈಲ್‌ ಮತ್ತು ಅಂತರ್ಜಾಲ ಸೇವೆಗಳ ಬಳಕೆಗೆ ಅವಕಾಶ ನೀಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಮಾಡಿದ್ದ ಶಿಫಾರಸ್ಸಿಗೆ  ಒಪ್ಪಿಗೆ ಸೂಚಿಸಲಾಗಿದೆ.
ಟೆಲಿಕಾಂ ಇಲಾಖೆಯ ಕುಂದುಕೊರತೆಗಳ ನಿವಾರಣೆಗೆ ಒಂಬುಡ್ಸ್ ಮನ್ ಹುದ್ದೆ ಸೃಷ್ಟಿಗೂ ಟೆಲಿಕಾಂ ಆಯೋಗ ಒಪ್ಪಿಗೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಿ ಮತ್ತು ವಿದೇಶಿ ಪ್ರಯಾಣ ಬೆಳೆಸುವವರಿಗೆ ಮೊಬೈಲ್ ಮತ್ತು ಇಂಟರ್ ನೆಟ್ ಸೇವೆ ಕಲ್ಪಿಸುವ ಬಗ್ಗೆ ದೂರಸಂಪರ್ಕ ಇಲಾಖೆಯು ಆಗಸ್ಟ್‌ 20ರಂದು ಟ್ರಾಯ್‌ ಸಲಹೆಯನ್ನು ಕೇಳಿತ್ತು. ಬಳಿಕ ವಿಮಾನ 3000 ಮೀಟರ್‌ಗಿಂತ ಮೇಲೆ ಹಾರಲು ಆರಂಭಿಸಿದ ಬಳಿಕ ಇಂಟರ್‌ನೆಟ್‌ ಸಂಪರ್ಕ ನೀಡಬಹುದು ಟ್ರಾಯ್‌ ಶಿಫಾರಸು ಮಾಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಪೋಕ್ಸೋ ಕೇಸ್​ ಆರೋಪಿಯ ಭೀಭತ್ಸ ಕೃತ್ಯ: ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ ಸಂತ್ರಸ್ತೆ ಸೇರಿ 6 ಮಂದಿಯ ಭೀಕರ ಹತ್ಯೆ!

ನಮ್ಮ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ: ದಸರಾದಲ್ಲಿ ಕಂಬಳ ಆಯೋಜನೆಗೆ ಯದುವೀರ್- ಪ್ರತಾಪ್ ಸಿಂಹ ವಿರೋಧ!