ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆ: ವರದಿ
ಆಟೋಮೊಬೈಲ್, ಕಟ್ಟಡ ನಿರ್ಮಾಣ, ಇಂಜಿನಿಯರಿಂಗ್ ಕ್ಷೇತ್ರಗಳಿಂದಾಗಿ ಏಪ್ರಿಲ್ ತಿಂಗಳ ನೇಮಕಾತಿಯ ಪ್ರಮಾಣವನ್ನು ಶೇ.21 ಕ್ಕೆ ಏರಿಕೆ ಮಾಡಿವೆ ಎಂದು ನೌಕರಿ.ಕಾಮ್ ನ ವೆಬ್ ಸೈಟ್ ವರದಿ ಮಾಡಿದೆ.
ನವದೆಹಲಿ: ಆಟೋಮೊಬೈಲ್, ಕಟ್ಟಡ ನಿರ್ಮಾಣ, ಇಂಜಿನಿಯರಿಂಗ್ ಕ್ಷೇತ್ರಗಳಿಂದಾಗಿ ಏಪ್ರಿಲ್ ತಿಂಗಳ ನೇಮಕಾತಿಯ ಪ್ರಮಾಣವನ್ನು ಶೇ.21 ಕ್ಕೆ ಏರಿಕೆ ಮಾಡಿವೆ ಎಂದು ನೌಕರಿ.ಕಾಮ್ ನ ವೆಬ್ ಸೈಟ್ ವರದಿ ಮಾಡಿದೆ.
ನೌಕರಿಯ ಜಾಬ್ ಸ್ಪೀಕ್ ಇಂಡೆಕ್ಸ್ ಪ್ರಕಾರ, ಕಳೆದ ವರ್ಷ ಕೈಗೊಳ್ಳಲಾದ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಸ್ವಭಾವ ಕಂಡುಬಂದಿತ್ತು. ಆದರೆ ಈ ವರ್ಷ ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆ ಕಾರಣವಾಗಲು ಆಟೋಮೊಬೈಲ್, ಕಟ್ಟಡ ನಿರ್ಮಾಣ, ಇಂಜಿನಿಯರಿಂಗ್ ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಿವೆ ಎಂದು ನೌಕರಿ.ಕಾಮ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿ ಸುರೇಶ್ ಹೇಳಿದ್ದಾರೆ.
2018 ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಡುಬಂದ ಬೆಳವಣಿಗೆಯಿಂದಾಗಿ ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆಯಾಗಿದ್ದು ಇದು ಉತ್ತಮ ಆರ್ಥಿಕ ವರ್ಷಕ್ಕೆ ಮುನ್ನುಡಿಯಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.