ಬ್ಯಾಂಕಿಂಗ್ ವಂಚನೆ: 2017-18 ರಲ್ಲಿ 21 ಬ್ಯಾಂಕ್ ಗಳು ಕಳೆದುಕೊಂಡ ಮೊತ್ತ ಬರೊಬ್ಬರಿ 25,775 ಕೋಟಿ! 
ವಾಣಿಜ್ಯ

ಬ್ಯಾಂಕಿಂಗ್ ವಂಚನೆ: 2017-18 ರಲ್ಲಿ 21 ಬ್ಯಾಂಕ್ ಗಳು ಕಳೆದುಕೊಂಡ ಮೊತ್ತ ಬರೊಬ್ಬರಿ 25,775 ಕೋಟಿ!

ಸಾರ್ವಜನಿಕ ವಲಯದ 21 ಬ್ಯಾಂಕ್ ಗಳು 2017-18 ರಲ್ಲಿ ಬರೊಬ್ಬರಿ 25,775 ಕೋಟಿ ರೂಪಾಯಿ ಕಳೆದುಕೊಂಡಿದೆ ಎಂಬ ಮಾಹಿತಿಯನ್ನು ಆರ್ ಟಿಐ ಒಂದು ಬಹಿರಂಗಪಡಿಸಿದೆ.

ಇಂದೋರ್: ಸಾರ್ವಜನಿಕ ವಲಯದ 21 ಬ್ಯಾಂಕ್ ಗಳು 2017-18 ರಲ್ಲಿ ಬರೊಬ್ಬರಿ 25,775 ಕೋಟಿ ರೂಪಾಯಿ ಕಳೆದುಕೊಂಡಿದೆ ಎಂಬ ಮಾಹಿತಿಯನ್ನು ಆರ್ ಟಿಐ ಒಂದು ಬಹಿರಂಗಪಡಿಸಿದೆ. 
ಪಂಜಾಬ್ ನ್ಯಾಷನಲ್ ಬ್ಯಾಂಕ್ ಅತಿ ಹೆಚ್ಚು ಅಂದರೆ 6461.13 ಕೋಟಿ ರೂಪಾಯಿ ನಷ್ಟ ಎದುರಿಸಿದೆ ಎಂದು ಚಂದ್ರಶೇಖರ್ ಗೌಡ್ ಎಂಬುವವರು ಸಲ್ಲಿಸಿದ್ದ ಆರ್ ಟಿಐಗೆ ಬಂದಿರುವ ಉತ್ತರದಿಂದ ತಿಳಿದುಬಂದಿದೆ. 12,636 ಕೋಟಿ ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ಮುಂಬೈ ಕೋರ್ಟ್ ನಲ್ಲಿ ಎರಡು ಪ್ರತ್ಯೇಕ ಚಾರ್ಜ್ ಶೀಟ್ ಗಳನ್ನು ದಾಖಲಿಸಿದೆ. 
ಆರ್ ಟಿಐ ಮಾಹಿತಿಯ ಪ್ರಕಾರ ಎಸ್ ಬಿಐ 2017-18 ರಲ್ಲಿ ಒಟ್ಟು 2,224.86 ಕೋಟಿ ರೂಪಾಯಿಗಳನ್ನು ಬ್ಯಾಂಕಿಂಗ್ ಫ್ರಾಡ್ ನಿಂದ ಕಳೆದುಕೊಂಡಿದ್ದರೆ ಬ್ಯಾಂಕ್ ಆಫ್ ಬರೋಡಾ 1,928.25 ಕೋಟಿ ರೂಪಾಯಿ, ಅಲ್ಲಹಾಬಾದ್ ಬ್ಯಾಂಕ್ 1,520.37 ಕೋಟಿ ರೂಪಾಯಿ, ಆಂಧ್ರ ಬ್ಯಾಂಕ್ 1,303.30 ಕೋಟಿ ರೂಪಾಯಿ, ಯುಕೋ ಬ್ಯಾಂಕ್ 1,224.64, ಐಡಿಬಿಐ ಬ್ಯಾಂಕ್ 1,116.53 ಯೂನಿಯನ್ ಬ್ಯಾಂಕ್  1,095.84 ಕೋಟಿ ರೂಪಾಯಿ, ಸೆಂಟ್ರಲ್ ಬ್ಯಾಂಲ್ ಆಫ್ ಇಂಡಿಯಾ 1,084.50 ರೂಪಾಯಿ, ಬ್ಯಾಂಕ್ ಆಫ್ ಮಹಾರಾಷ್ಟ್ರ 1,029.23 ರೂಪಾಯಿ ಓವರ್ಸೀಸ್ ಬ್ಯಾಂಕ್ 1,015.79 ರೂಪಾಯಿ ನಷ್ಟ ಎದುರಿಸಿವೆ ಎಂದು ಆರ್ ಟಿಐ ಗೆ ನೀಡಿರುವ ಉತ್ತರದಲ್ಲಿ ಆರ್ ಬಿಐ ತಿಳಿಸಿದೆ.
ಆರ್ ಟಿಐ ಗೆ ನೀಡಲಾಗಿರುವ ಉತ್ತರದಲ್ಲಿ ಒಂದು ಲಕ್ಷ ರೂಪಾಯಿ ಮೊತ್ತದ ವರೆಗಿನ ವಂಚನೆ ನಡೆದಿರುವ ಪ್ರಕರಣಗಳ ಬಗ್ಗೆ ಮಾತ್ರ ಮಾಹಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT