ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) 
ವಾಣಿಜ್ಯ

ಎಸ್ ಬಿಐಗೇ ದೋಖಾ: ಏಪ್ರಿಲ್-ಸೆಪ್ಟೆಂಬರ್ ನಲ್ಲಿ 5,555 ಕೋಟಿ ರೂ. ಮೌಲ್ಯದ 1,329 ವಂಚನೆ ಪ್ರಕರಣ!

5,555.48 ಕೋಟಿ ರೂ.ಮೊತ್ತದ ಬರೋಬ್ಬರಿ 1,329 ವಂಚನೆ ಪ್ರಕರಣಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೆಳಕಿಗೆ ಬಂದಿದೆ ಎಂದು ದೇಶದ ಬೃಹತ್ ಸಾರ್ವಜನಿಕ ಬ್ಯಾಂಕ್......

ಇಂದೋರ್: 5,555.48 ಕೋಟಿ ರೂ.ಮೊತ್ತದ  ಬರೋಬ್ಬರಿ  1,329 ವಂಚನೆ ಪ್ರಕರಣಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೆಳಕಿಗೆ ಬಂದಿದೆ ಎಂದು ದೇಶದ ಬೃಹತ್ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೇಳಿದೆ. ಆರ್ಟಿಐ ಮೂಲಕ ಕೇಳಳಾದ ಪ್ರಶ್ನೆಗೆ ಬ್ಯಾಂಕ್ ಈ ಉತ್ತರ ನೀಡಿದೆ.
ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಎಸ್ಬಿಐ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) 723.06 ಕೋಟಿ ರೂ. ಮೊತ್ತದ 669 ಪ್ರಕರಣಗಳು ವರದಿಯಾಗಿದ್ದರೆ  ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್  4,832.42 ಕೋಟಿ ರೂ. ಮೌಲ್ಯದ 660 ಪ್ರಕರಣಗಳು ವರದಿಯಾಗಿದೆ ಎಂದು ವಿವರಿಸಿದೆ.
ಈ ಅಂಕಿಅಂಶಗಳ ಪ್ರಕಾರ ಮೊದಲ ಹಾಗೂ ಎರಡನೇ ತ್ರೈಮಾಸಿಕ ಅವಧಿಯಲ್ಲಿ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚಿನ ವ್ಯತ್ಯಾಸವೇನೂ ಆಗಿಲ್ಲದಿರುವುದು ಕಂಡಿದೆ. ಎರಡೂ ಅವಧಿಯಲ್ಲಿ ಹೋಲಿಸಿದಾಗ ದ್ವಿತೀಯ ಅವಧಿಯಲ್ಲಿ ಮೊದಲಿಗಿಂತ ಕೇವಲ 9 ಪ್ರಕರಣಗಳಷ್ತೇ ಕಡಿಮೆಯಾಗಿದ್ದು ಕಾನೀಸುತ್ತದೆ.ಆದರೆ ಎರಡೂ ತ್ರೈಮಾಸಿಕಗಳಿಂದ ಒಟ್ಟಾರೆ  568.33 ಕೋಟಿ ರು. ವಂಚನೆ ನಡೆದಿದೆ.
ಬ್ಯಾಂಕಿಂಗ್ ವಂಚನೆಯ ಕಾರಣ ಬ್ಯಾಂಕ್ ಗೆ ಆದ ಹಣಕಾಸಿನ ನಷ್ಟವೆಷ್ಟು ಎಂದೂ ಗೌಡ ಪ್ರಶ್ನಿಸಿದ್ದು ಇದರ ಕುರಿತು ಪ್ರತಿಕ್ರಿಯೆ ನೀಡಿದ ಬ್ಯಾಂಕ್ "ತಾನಿನ್ನೂ ಆ ಮೊತ್ತವನ್ನು ಎಣಿಕೆ ಮಾಡಿಲ್ಲ" ಎಂದಿದೆ.
ನಿರ್ದಿಷ್ಟ ಅವಧಿಯಲ್ಲಿ ಬ್ಯಾಂಕಿಂಗ್ ವಂಚನೆಗಳ ಕಾರಣದಿಂದ ಬ್ಯಾಂಕಿನ ಗ್ರಾಹಕರು ಕಳೆದುಕೊಂಡ ಹಣದ ಬಗ್ಗೆ ಕೇ:ಳಲಾಗಿರುವ ಪ್ರಶ್ನೆಗೆ "ಎಸ್ಬಿಐ ಗ್ರಾಹಕರಿಗಾದ ಮೋಸ, ಅವರು ಕಳೆದುಕೊಂಡ ಹಣದ ಲೆಕ್ಕವನ್ನು ಬಹಿರಂಗಪಡಿಸುವುದು ಸಾಧ್ಯವಿಲ್ಲ. ಆರ್ಟಿಐ ಕಾಯಿದೆ, 2005 ರ ಸೆಕ್ಷನ್ 7 (9) ಅಡಿಯಲ್ಲಿ ಇದು ಬರುವುದಿಲ್ಲ" ಎಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT