ವಾಣಿಜ್ಯ

ಇಂದಿನಿಂದ ಇಂಡಿಯಾ ಪೋಸ್ಟ್‌ ಪೇಮೆಂಟ್ ಬ್ಯಾಂಕ್‌ ಕಾರ್ಯಾರಂಭ, ಅಂಚೆ ಬ್ಯಾಂಕ್ ವೈಶಿಷ್ಟ್ಯಗಳೇನು?

Raghavendra Adiga
ಬೆಂಗಳೂರು: ಇಂದಿನಿಂದ (ಸೆಪ್ಟೆಂಬರ್ 1) ಬಾರತೀಯ ಅಂಚೆ ಇಲಾಖೆ ದೇಶಾದ್ಯಂತ 'ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ)' ಸೇವೆಯನ್ನು ಪ್ರಾರಂಭಿಸುತ್ತಿದೆ. 
ಈ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು ಬೆಂಗಳೂರಿನ ಪುರಭವನ (ಟೌನ್ ಹಾಲ್) ನಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಮ್ಯೂಜಿಯಂ ರಸ್ತೆ ಅಂಚೆ ಕಛೇರಿಯಲಿ ಪ್ರಾರಂಭವಾಗಿರುವ ಪೇಮೆಂಟ್ ಬ್ಯಾಂಕ್ ಸೇವೆಗೆ ಚಾಲನೆ ನೀಡಲಿದ್ದಾರೆ.
 ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ಐಪಿಪಿಬಿ ಸೇವೆಗೆ ಚಾಲನೆ ನಿಡಿದ್ದು ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದೇಶದ ಎಲ್ಲಾ ಜನರಿಗೆ ಬ್ಯಾಂಕಿಂಗ್ ಸೌಕರ್ಯ ಒದಗಿಸುವುದು ಐಪಿಪಿಬಿ ಯೋಜನೆಯ ಉದ್ದೇಶವಾಗಿದೆ."ಮನೆ ಮನೆಗೆ ನಮ್ಮ ಬ್ಯಾಂಕ್" ಎನ್ನುವ ದ್ಯೇಯದೊಡನೆ ಆರಂಭವಾಗಿರುವ ಸೇವೆಯು ಇದುವರೆಗೆ ಬ್ಯಾಂಕಿಂಗ್ ಸೇವೆಯ ಸಂಪೂಣ ಲಾಭ ಪಡೆಯಲಾರದವರನ್ನು ಸಹ ಈ ಸೇವೆಯೊಳಗೆ ಸೇರ್ಪಡೆ ಮಾಡಿಕೊಳ್ಳಲಿದೆ
ಐಪಿಪಿಬಿ ಮೂಲಕ ಗ್ರಾಹಕರು ಬ್ಯಾಂಕ್ ಸೇವೆಯಲ್ಲಿ ಸಾಮಾನ್ಯವಾಗಿ ಲಭ್ಯವಾಗುವಂತಹಾ ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣದ ವರ್ಗಾವಣೆ, ಬಿಲ್ ಪಾವತಿ ಸೇರಿ ಅನೇಕ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಅವಕಾಶವಿದೆ.
ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಇದ್ದವರು ಯಾರೇ ಆದರೂ ಈ ಸೇವೆಗೆ ಸೇರಿಕೊಳ್ಳಲು ಅವಕಾಶವಿದೆ.ಕಾಗದ ರಹಿತ ಖಾತೆ, ವ್ಯವಹಾರ ನಡೆಸುವ ಬ್ಯಾಂಕ್ ಸೇವೆ ಇದಾಗಿದ್ದು ಇದರಲ್ಲಿ ಕನಿಷ್ಟ ಠೇವಣಿ ಎನ್ನುವ ಕಲ್ಪನೆ ಇಲ್ಲ.
ಗರಿಷ್ಠ ಒಂದು ಲಕ್ಷದವರೆಗೆ ಠೇವಣಿ ಇಡುವ ಅವಕಾಶವಿದೆ. ಹಾಗೆಯೇ ಗ್ರಾಹಕರಿಗೆ ನೀಡಲಾಗುವ 'ಕ್ಯೂಆರ್‌ ಕಾರ್ಡ್‌' ನೀಡಲಾಗುವುದು.ವಿಶೇಷವೆಂದರೆ ಇದನ್ನು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನ ರೀತಿ ಬಳಸಲು ಸಾಧ್ಯವಿಲ್ಲ.
SCROLL FOR NEXT