ವಾಣಿಜ್ಯ

ಫ್ಲಿಪ್ ಕಾರ್ಟ್ ನೊಂದಿಗೆ ಪೈಪೋಟಿ, ಅಮೇಜಾನ್ ಇಂಡಿಯಾದಿಂದ ಹಿಂದಿ ವೆಬ್ ಸೈಟ್, ಆಪ್ ಗೆ ಚಾಲನೆ

Srinivas Rao BV
ಫ್ಲಿಪ್ ಕಾರ್ಟ್ ಗೆ ಪೈಪೋಟಿ ನೀಡಲು ಯತ್ನಿಸುತ್ತಿರುವ ಅಮೇಜಾನ್ ಇಂಡಿಯಾ ಈಗ ಹಿಂದಿ ವೆಬ್ ಸೈಟ್, ಆಪ್ ಗೆ ಚಾಲನೆ ನೀಡಿದೆ. 
ಭಾರತದಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ನಲ್ಲಿ ಪ್ರಾಬಲ್ಯ ಮೆರೆಯುವುದಕ್ಕೆ ಅಮೇಜಾನ್ ಸ್ಥಳೀಯ ಭಾಷೆಯಲ್ಲಿ ವೆಬ್ ಸೈಟ್ ಗೆ ಚಾಲನೆ ನೀಡಿದೆ. ಪ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್, ಪೇಟಿಎಂ ಮಾಲ್ ಸೇರಿದಂತೆ ಭಾರತದಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವ ಯಾವುದೇ ಇ-ಕಾಮರ್ಸ್ ಸಂಸ್ಥೆಗಳು ಸ್ಥಳೀಯ ಭಾಷೆಗಳಲ್ಲಿ ವೆಬ್ ಸೈಟ್ ಗಳನ್ನು ಹೊಂದಿಲ್ಲ. 
ಅಮೇಜಾನ್ ಇಂಡಿಯಾ ಹಿಂದಿಯಲ್ಲಿ ವೆಬ್ ಸೈಟ್ ಗೆ ಚಾಲನೆ ನೀಡಿರುವುದರಿಂದ ಭಾರತದ ಸಣ್ಣ ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುವುದಕ್ಕೆ ಸಾಧ್ಯವಾಗಲಿದೆ. 
SCROLL FOR NEXT