ವಾಣಿಜ್ಯ

ಮಹಿಳೆಯರಿಗೆ ಉದ್ಯೋಗದ ಕುರಿತ ಜಾಹೀರಾತು: ಫೇಸ್ ಬುಕ್ ವಿರುದ್ಧ ಪ್ರಕರಣ ದಾಖಲು!

Srinivas Rao BV
ವಾಷಿಂಗ್ ಟನ್: ಮಹಿಳೆಯರಿಗೆ ಉದ್ಯೋಗದ ಜಾಹಿರಾತುಗಳನ್ನು ಮರೆಮಾಚಿರುವ ಫೇಸ್ ಬುಕ್ ಈಗ ಸಂಕಷ್ಟದಲ್ಲಿ ಸಿಲುಕಿದೆ.  ಸಾಮಾಜಿಕ ಜಾಲತಾಣ ದೈತ್ಯ ಅಮೆರಿಕನ್ ಸಿವಿಲ್ ಲಿಬರ್ಟೀಸ್ (ಎಸಿಎಲ್ ಯು) ಫೇಸ್ ಬುಕ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಪುರುಷರಿಗೆ ಮಾತ್ರ ಉದ್ಯೋಗದ ಜಾಹಿರಾತುಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿದೆ. 
ಎಸಿಎಲ್ ಯು ಜೊತೆಗೆ ವರ್ಕರ್ಸ್ ಆಫ್ ಅಮೆರಿಕ ಹಾಗೂ ಎಂಪ್ಲಾಯ್ಮೆಂಟ್ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಫೇಸ್ ಬುಕ್ ವಿರುದ್ಧ ಆರೋಪ ಮಾಡಿದ್ದು, ಅಮೆರಿಕದ ಸಮಾನ ಉದ್ಯೋಗ ಅವಕಾಶಕ್ಕಾಗಿ ಇರುವ ಆಯೋಗದಲ್ಲಿ ಫೇಸ್ ಬುಕ್ ವಿರುದ್ಧ ದೂರು ದಾಖಲಿಸಲಾಗಿದೆ. 
ಪುರುಷ ಕೇಂದ್ರಿತ ಉದ್ಯೋಗಗಳನ್ನು ಮಾತ್ರ ಫೇಸ್ ಬುಕ್ ಜಾಹಿರಾತುಗಳಲ್ಲಿ ಪ್ರದರ್ಶಿಸಲಾಗುತ್ತದೆ, ಅದು ಕೇವಲ ಯುವಕರಿಗೆ ಮಾತ್ರ ತಲುಪುತ್ತದೆ, ಮಹಿಳೆಯರಿಗೆ, ವಯಸ್ಸಾದ ಯುವಕರಿಗೆ ಅಂತಹ ಯಾವುದೇ ಜಾಹಿರಾತುಗಳೂ ಲಭ್ಯವಿಲ್ಲ ಎಂದು ಫೇಸ್ ಬುಕ್ ಬಳಕೆದಾರರು ಆರೋಪಿಸಿದ್ದು, ಸಾಮಾಜಿಕ ಜಾಲತಾಣ ದೈತ್ಯ ಈ ನಡೆಯನ್ನು ಬದಲಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. 
SCROLL FOR NEXT