ಸಾಂದರ್ಭಿಕ ಚಿತ್ರ 
ವಾಣಿಜ್ಯ

ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್ ಬಿಐ ಮಧ್ಯಪ್ರವೇಶಿಸಬೇಕು; ಎಸ್ ಬಿಐ

ಭಾರತೀಯ ರೂಪಾಯಿ ಕುಸಿತವನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಾಟ್ ...

ಮುಂಬೈ: ಭಾರತೀಯ ರೂಪಾಯಿ ಕುಸಿತವನ್ನು ತಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಾಟ್ ಮಾರ್ಕೆಟ್(ಈಗಲೇ ಒಪ್ಪಂದ ಮಾಡಿಕೊಂಡು ಈಗಲೇ ವಹಿವಾಟು ನಡೆಸುವುದು) ಮತ್ತು ಫಾರ್ವರ್ಡ್ ಮಾರ್ಕೆಟ್( ಈಗ ಒಪ್ಪಂದ ಮಾಡಿಕೊಂಡು ಮುಂದೆ ಮಾರಾಟ ಮಾಡುವುದು) ನಲ್ಲಿ ಮಧ್ಯೆ ಪ್ರವೇಶಿಸಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಕೊರಾಪ್ ವರದಿ ತಿಳಿಸಿದೆ.

ಸ್ಪಾಟ್ ಮತ್ತು ಫಾರ್ವರ್ಡ್ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ನೀಡಿರುವ ದರದಲ್ಲಿ ಮಾರಾಟ ಮಾಡುವುದು ಅಥವಾ ಖರೀದಿಸುವುದಾಗಿದೆ.

ವರದಿಯ ಪ್ರಕಾರ, ಜೂನ್ 2008ರಿಂದ ಮೇ 2009ರವರೆಗೆ ಭಾರತೀಯ ರೂಪಾಯಿ ಬೆಲೆ ಶೇಕಡಾ 13ರಷ್ಟು ಇಳಿಕೆಯಾದಾಗ, ಆಗ ವಿದೇಶಿ ವಿನಿಮಯ ಮೀಸಲು 312 ಶತಕೋಟಿ ಡಾಲರ್ ನಷ್ಟು ಇದ್ದರೂ ಕೂಡ ಆರ್ ಬಿಐ 43 ಶತಕೋಟಿ ಡಾಲರ್ ಗೆ ಮಾರಾಟ ಮಾಡಿತ್ತು.

1990ರ ದಶಕದಲ್ಲಿ ಕೂಡ ಒಟ್ಟು ವಿದೇಶಿ ವಿನಿಮಯ ಮೀಸಲು 40 ಶತಕೋಟಿ ಡಾಲರ್ ಗಿಂತ ಕಡಿಮೆಯಾಗಿದ್ದಾಗ ವಿದೇಶಿ ವಿನಿಮಯ ಮಾರುಕಟ್ಟೆಗೆ ಆರ್ ಬಿಐ ಮಧ್ಯ ಪ್ರವೇಶಿಸಿ ರೂಪಾಯಿ ಕುಸಿತವನ್ನು ತಡೆಗಟ್ಟಲು ಒಟ್ಟು ವಿದೇಶಿ ವಿನಿಮಯವನ್ನು ಶೇಕಡಾ 8ರಿಂದ 9ರಷ್ಟು ಮಾರಾಟ ಮಾಡಿತ್ತು.

ನಾವು ಪ್ರಸ್ತುತ ಇರುವ ಮಾರುಕಟ್ಟೆ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಆರ್ ಬಿಐ ಶೇಕಡಾ 10ರಷ್ಟು ಹೋಗಬಹುದಾದ ಸಾಧ್ಯತೆಯಿದ್ದು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚುವರಿ 25 ಶತಕೋಟಿ ಡಾಲರ್ ನ್ನು ಮಾರಾಟ ಮಾಡಬಹುದಾಗಿದೆ ಎಂದು ಎಸ್ ಬಿಐ ವರದಿ ತಿಳಿಸಿದೆ.

ಡಾಲರ್ ಎದುರು ರೂಪಾಯಿ ಬೆಲೆ ಸ್ಥಿರವಾಗಿ ಉಳಿಯಲು ಆರ್ ಬಿಐ ಮಧ್ಯವರ್ತಿಗಳ ಮೂಲಕ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ