ವಾಣಿಜ್ಯ

2019-20 ರಲ್ಲಿ ಭಾರತದ ಜಿಡಿಪಿ ಶೇ.7.5 ಕ್ಕೆ ಜಿಗಿತ: ವಿಶ್ವಬ್ಯಾಂಕ್ ವಿಶ್ವಾಸ

Srinivas Rao BV
ವಾಷಿಂಗ್ ಟನ್: ಭಾರತದ ಜಿಡಿಪಿ 2019-20 ನೇ ಸಾಲಿನಲ್ಲಿ ಶೇ.7.5 ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 
ದಕ್ಷಿಣ ಏಷ್ಯಾ ಬೆಳವಣಿಗೆಗೆ ಸಂಬಂಧಿಸಿದಂತೆ ವರದಿ ಪ್ರಕಟಿಸಿರುವ ವಿಶ್ವಬ್ಯಾಂಕ್, ಮುಂದುವರೆದ ಬಲಿಷ್ಠ ಬಂಡವಾಳದಿಂದ ಭಾರತದ ಜಿಡಿಪಿ 19-20 ನೇ ಸಾಲಿನಲ್ಲಿ ಜಿಡಿಪಿ ಶೇ.7.5 ರಷ್ಟಾಗಲಿದೆ ಎಂದಿದೆ. 
2018-19 ನೇ ಸಾಲಿನ ಜಿಡಿಪಿ ಬೆಳವಣಿಗೆ ಶೇ.7.2 ರಷ್ಟಿರಲಿದೆ. ಮೊದಲ ತ್ರೈಮಾಸಿಕದ ಅಂಕಿ-ಅಂಶಗಳ ಪ್ರಕಾರ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ. ಕೈಗಾರಿಕಾ ಬೆಳವಣಿಗೆ ಶೇ.7.9 ರಷ್ಟಿದ್ದರೆ, ಕೃಷಿ ಬೆಳವಣಿಗೆ ದೃಢವಾಗಿದ್ದು ಶೇ.4 ರಷ್ಟಿದೆ. 
ಇನ್ನು ಇದೇ ವೇಳೆ 2018-19 ರ ಆರ್ಥಿಕ ವರ್ಷದ ಬಹುಪಾಲು ಹಣದುಬ್ಬರ ನಿಯಂತ್ರಣದಲ್ಲಿತ್ತು ಎಂದು ವರದಿ ಹೇಳಿದೆ. ಭಾರತದ ರಫ್ತು ಪ್ರಮಾಣವೂ ಸುಧಾರಣೆ ಕಂಡಿದ್ದು, ತೈಲ ಬೆಲೆ ಕಡಿಮೆಯಾಗಿದೆ. ಪರಿಣಾಮ ಚಾಲ್ತಿ ಖಾತೆ ಕೊರತೆ ದೇಶದ ಒಟ್ಟು ಆಂತರಿಕ ಉತ್ಪನ್ನದ ಜಿಡಿಪಿಯ ಶೇ.1.9 ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 
SCROLL FOR NEXT