ವಾಣಿಜ್ಯ

ಹೊಸ ವಾಹನ ಖರೀದಿದಾರರಿಗೆ ಬಿಗ್ ಶಾಕ್, ವಾಹನ ನೋಂದಣಿ ಶುಲ್ಕ ಶೇ.1900 ರಷ್ಟು ಹೆಚ್ಚಿಸಲು ಮುಂದಾದ ಕೇಂದ್ರ

Lingaraj Badiger
ನವದೆಹಲಿ: ಕೇಂದ್ರ ಸರ್ಕಾರ ಹೊಸ ವಾಹನ ಖರೀದಿದಾದರಿಗೆ ಬಿಗ್ ಶಾಕ್ ನೀಡುತ್ತಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಸಂಖ್ಯೆಯನ್ನು ತಗ್ಗಿಸುವ ಯತ್ನದ ಭಾಗವಾಗಿ ಹೊಸ ವಾಹನಗಳ ನೋಂದಣಿ ಹಾಗೂ ನವೀಕರಣ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಮುಂದಾಗಿದೆ.
ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಕರಡು ಪ್ರಸ್ತಾವನೆ ಸಿದ್ಧಪಡಿಸಿದ್ದು, ಹೊಸ ವಾಹನ ಖರೀದಿಯ ಶುಲ್ಕವನ್ನು ಶೇ.1900ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡುತ್ತಿದೆ.
ಹೊಸ ಪ್ರಸ್ತಾವನೆಯ ಪ್ರಕಾರ, ಸದ್ಯ 50 ರೂಪಾಯಿ ಇರುವ ನೋಂದಣಿ ಶುಲ್ಕ 1 ಸಾವಿರ ರೂಪಾಯಿಗೆ ಹಾಗೂ ನವೀಕರಣ ಶುಲ್ಕ 50 ರೂ.ನಿಂದ 2 ಸಾವಿರ ರೂಪಾಯಿಗೆ ಹೆಚ್ಚಿಸಲಾಗುತ್ತಿದೆ.
ಇನ್ನು ಕಾರು ಮತ್ತು ಜೀಪಿನ ನೋಂದಣಿ ಶುಲ್ಕವನ್ನು 1 ಸಾವಿರದಿಂದ 10 ಸಾವಿರ ರೂಪಾಯಿಗೆ ಹಾಗೂ ನವೀಕರಣ ಶುಲ್ಕವನ್ನು 1 ಸಾವಿರದಿಂದ 20 ಸಾವಿರ ರೂಪಾಯಿಗೆ ಹೆಚ್ಚಿಸಲಾಗುತ್ತಿದೆ. ವಿದೇಶದಿಂದ ಆಮದು ಮಾಡಿಕೊಂಡ ಕಾರಿನ ನೋಂದಣಿ ಶುಲ್ಕವನ್ನು 5 ಸಾವಿರದಿಂದ 40 ಸಾವಿರ ರೂಪಾಯಿಗೆ ಹೆಚ್ಚಿಸಲಾಗುತ್ತಿದೆ.
ಈ ಮಧ್ಯೆ, ಹಳೆ ಕಾರನ್ನು ಸ್ಕ್ರ್ಯಾಪ್ ಮಾಡಿದರೆ ಹೊಸ ಕಾರಿನ ನೋಂದಣಿ ಶುಲ್ಕದಿಂದ ವಿನಾಯ್ತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
SCROLL FOR NEXT