ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕಿದೆ : ಜೊಮ್ಯಾಟೊ ಆ್ಯಪ್ ಅನ್ ಇನ್ ಸ್ಟಾಲ್ ಮಾಡಿ ಪ್ರತಿಭಟನೆ
ಇದೀಗ ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕಿದೆ ಎಂದು ಹೇಳಿ ಪುಡ್ ಆರ್ಡರ್ ರದ್ದು ಮಾಡಿದ್ದ ಜೊಮ್ಯಾಟೊ ಗ್ರಾಹಕರಿಗೆ ಬೆಂಬಲ ಸೂಚಿಸಿ ಟ್ವೀಟಿಗರು ಜೊಮ್ಯಾಟೊ ಆ್ಯಪ್ ಅನ್ ಇನ್ ಸ್ಟಾಲ್ ಮಾಡಿ ಪ್ರತಿಭಟಿಸಿದ್ದಾರೆ
ಬೆಂಗಳೂರು: ಹಿಂದುವಲ್ಲದ ಆಹಾರ ಪೂರೈಕೆ ವ್ಯಕ್ತಿಯಿಂದ ಆಹಾರ ಸ್ವೀಕರಿಸುವುದಿಲ್ಲ ಎಂದು ಹೇಳಿ ಜೊಮ್ಯಾಟೊ ಗ್ರಾಹಕರೊಬ್ಬರು ಪುಡ್ ಆರ್ಡರ್ ರದ್ದು ಮಾಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ಜೊಮ್ಯಾಟೊ ಆಹಾರಕ್ಕೆ ಧರ್ಮವಿಲ್ಲ, ಆಹಾರವೇ ಧರ್ಮ ಎಂದಿತ್ತು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕಿದೆ ಎಂದು ಹೇಳಿ ಪುಡ್ ಆರ್ಡರ್ ರದ್ದು ಮಾಡಿದ್ದ ಜೊಮ್ಯಾಟೊ ಗ್ರಾಹಕರಿಗೆ ಬೆಂಬಲ ಸೂಚಿಸಿ ಟ್ವೀಟಿಗರು ಜೊಮ್ಯಾಟೊ ಆ್ಯಪ್ ಅನ್ ಇನ್ ಸ್ಟಾಲ್ ಮಾಡಿ ಪ್ರತಿಭಟಿಸಿದ್ದಾರೆ. #ZomatoUninstalled #boycottzomato ಇಂದು ಟ್ವೀಟರ್ ನಲ್ಲಿ ಟಾಪ್ ಟ್ರೆಂಡ್ ಆಗಿದೆ.
ಇದೇ ವೇಳೆ ಹಿಂದು ಅಲ್ಲದ ಆಹಾರ ಪೂರೈಕೆ ವ್ಯಕ್ತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜಬಲ್ಪುರ್ ಟ್ವೀಟಿಗರ ವಿರುದ್ಧ ನೋಟಿಸ್ ಕಳುಹಿಸಲು ಮಧ್ಯ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.