ವಾಣಿಜ್ಯ

ಆರ್ ಟಿಜಿಎಸ್ ವಹಿವಾಟು ಸಮಯ ವಿಸ್ತರಿಸಿದೆ ಆರ್ ಬಿಐ

Lingaraj Badiger

ನವದೆಹಲಿ: ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವುದಕ್ಕಾಗಿ ಇತ್ತೀಚಿಗಷ್ಟೇ ಆರ್ ಟಿಜಿಎಸ್ ಹಾಗೂ ನೆಫ್ಟ್ ಶುಲ್ಕವನ್ನು ರದ್ದುಪಡಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ), ಇದೀಗ ಆರ್ ಟಿಜಿಎಸ್ ಸಮಯವನ್ನು ವಿಸ್ತರಿಸಿದೆ.

ಸದ್ಯ ಆರ್ ಟಿಜಿಎಸ್ ವಹಿವಾಟು ನಡೆಸಲು ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಅವಕಾಶವಿದೆ. ಈಗ ಅದನ್ನು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾಗೂ ಅಂತರ ಬ್ಯಾಂಕ್ ವ್ಯವಹಾರಕ್ಕೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 7.45ರ ವರೆಗೆ ಅವಕಾಶ ನೀಡಲಾಗಿದೆ. 

ಆರ್ ಬಿಐನ ಈ ನೂತನ ಆದೇಶ ಆಗಸ್ಟ್ 26ರಿಂದ ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SCROLL FOR NEXT