ವಾಣಿಜ್ಯ

ಬೆಂಗಳೂರಿನ ಗ್ರಾಹಕರಿಗಾಗಿ 'ಫ್ರೆಶ್ ಸ್ಟೋರ್' ಪ್ರಾರಂಭಿಸಿದ ಅಮೇಜಾನ್-ಅಗತ್ಯ ವಸ್ತುಗಳಿನ್ನು 2 ಗಂಟೆಗಳಲ್ಲಿ ಲಭ್ಯ!

Raghavendra Adiga

ಬೆಂಗಳೂರು: ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಅಮೇಜಾನ್ ಇಂಡಿಯಾ ಅಮೇಜಾನ್ ಫ್ರೆಶ್ ಸ್ಟೋರ್ ಗಳನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಅಮೇಜಾನ್ ನಲ್ಲಿ ಬೆಳಿಗ್ಗೆ ಆರರಿಂದ ಮಧ್ಯರಾತ್ರಿವರೆಗೆ ಅಮೆಜಾನ್ ಪ್ರೈಮ್ ನೌ ಶಕ್ತವಾಗಿ "ಅಮೇಜಾನ್ ಫ್ರೆಶ್ ಸ್ಟೋರ್" ಸೇವೆ ಲಭ್ಯವಿರಲಿದೆ.

ಇದರೊಡನೆ ಗ್ರಾಹಕರು ತಮ್ಮ ಸಂಪೂರ್ಣ ದಿನಸಿ ಅಗತ್ಯಗಳು, ಐದು ಸಾವಿರಕ್ಕೂ ಹೆಚ್ಚು ವೆರೈಟಿ ಹಣ್ಣು, ತರಕಾರಿಗಳು, ಡೈರಿ, ಮಾಂಸ, ಐಸ್ ಕ್ರೀಂ ಹಾಗೂ ಒಣ ಹಣ್ಣುಗಳಂತಹಾ ದಿನನಿತ್ಯದ ಆಹಾರ, ವೈಯುಕ್ತಿಕ ಆರೈಕೆ ಹಾಗೂ ಮನೆಬಳಕೆ ವಸ್ತುಗಳ ಆರ್ಡರ್ ಮಾಡಬಹುದಾಗಿದೆ. ಈ ವಿತರಣೆ ಅಮೇಜಾನ್ ಪ್ರೈಮ್ ನೌ ಅಪ್ಲಿಕೇಷನ್ ಗಳಲ್ಲಿ ಲಭ್ಯವಿದ್ದು ಪ್ರೈಮ್ ನೌ ಆಪ್ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್ ಗ್ರಾಹಕರಿಗೆ ಈ ಸೇವೆ ಲಭಿಸಲಿದೆ.

ಅಮೇಜಾನ್ ನಲ್ಲಿ ಅಮೇಜಾನ್ ಫ್ರೆಶ್ ನೊಡನೆ ಗ್ರಾಹಕರು ಅಗತ್ಯ ವಸ್ತುಗಳನ್ನು ಆರ್ಡರ್ ಮಾಡುವ ಅನುಕೂಲವಿದ್ದು ಆರ್ಡರ್ ಮಾಡಿದ ಸರಕು ಎರಡೇ ಗಂಟೆಗಳಲ್ಲಿ ವಿತರಣೆಯಾಗುವ ಅನುಕೂಲವಿದೆ. ಗ್ರಾಹಕರು ತಾಜಾ ಹಣ್ಣು ತರಕಾರಿ ಸೇರಿ ಇನ್ನಿತರೆ ದಿನಸಿ ಪದಾರ್ಥಗಳನ್ನು ಆರ್ಡರ್ ಮಾಡಬಹುದು ಹಾಗೂ ಎರಡೇ ಗಂಟೆಗಳಲ್ಲಿ ಪಡೆಯಬಹುದು. ನಾವಿದನ್ನು ಸಧ್ಯದಲ್ಲೇ ಬೆಂಗಳೂರಿನಲ್ಲಿ ಪ್ರಾರಂಭಿಸಲಿದ್ದು ಭವಿಷ್ಯದಲ್ಲಿ ಇನ್ನಿತರೆ ನಗರಗಳಿಗೆ ವಿಸ್ತರಿಸಲಿದ್ದೇವೆ ಎಂದು ಅಮೇಜಾನ್ ಇಂಡಿಯಾ ವರ್ಗ ನಿರ್ದೇಶಕ ಸಿದ್ದಾರ್ಥ್ ನಂಬಿಯಾರ್ ಹೇಳಿದ್ದಾರೆ.

ಅಮೇಜಾನ್ ಪ್ರೈಮ್ ಗ್ರಾಹಕರು ಅಮೇಜಾನ್ ಫ್ರೆಶ್ ನೊಡನೆ 49 ರು. ನೊಡನೆ ಈ ವಿಶೇಷ ಸೇವೆಗೆ ಪ್ರವೇಶ ಪಡೆಯುತ್ತಾರೆ.ಎಲ್ಲಾ ಗ್ರಾಹಕರಿಗೆ ಬೆಳಿಗ್ಗೆ ಆರರಿಂದ ಮಧ್ಯರಾತ್ರಿಯವರೆಗೆ ರು. 600ಕ್ಕಿಂತ ಹೆಚ್ಚಿನ ಆರ್ಡರ್ ಗಳಿಗೆ ಉಚಿತ ವಿತರಣೆಯನ್ನು ಒದಗಿಸಲಾಗುತ್ತದೆ.

SCROLL FOR NEXT