ಕರ್ನಾಟಕದಲ್ಲಿ ಏರ್ ಟೆಲ್ 3 ಜಿ ನೆಟ್ ವರ್ಕ್ ಸ್ಥಗಿತ
ದೇಶಾದ್ಯಂತ 3 ಜಿ ತಂತ್ರಜ್ಞಾನ ಹಂತದಿಂದ ಹಿಮ್ಮುಖವಾಗಲು ಭಾರ್ತಿ ಏರ್ ಟೆಲ್ ಚಿಂತನೆ ನಡೆಸಿದ್ದು,ಕರ್ನಾಟಕ ರಾಜ್ಯಾದ್ಯಂತ 3ಜಿ ನೆಟ್ ವರ್ಕ್ ನ್ನು ಸ್ಥಗಿತಗೊಳಿಸುವುದಾಗಿ ಇಂದು ಪ್ರಕಟಿಸಿದೆ.
ಬೆಂಗಳೂರು: ದೇಶಾದ್ಯಂತ 3 ಜಿ ತಂತ್ರಜ್ಞಾನ ಹಂತದಿಂದ ಹಿಮ್ಮುಖವಾಗಲು ಭಾರ್ತಿ ಏರ್ ಟೆಲ್ ಚಿಂತನೆ ನಡೆಸಿದ್ದು,ಕರ್ನಾಟಕ ರಾಜ್ಯಾದ್ಯಂತ 3ಜಿ ನೆಟ್ ವರ್ಕ್ ನ್ನು ಸ್ಥಗಿತಗೊಳಿಸುವುದಾಗಿ ಇಂದು ಪ್ರಕಟಿಸಿದೆ.
ರಾಜ್ಯದಲ್ಲಿ ಈಗ ಏರ್ಟೆಲ್ ಮೊಬೈಲ್ ಬ್ರಾಡ್ಬ್ಯಾಂಡ್ ಸೇವೆಗಳು ಹೈಸ್ಪೀಡ್ 4 ಜಿ ನೆಟ್ವರ್ಕ್ ನೊಂದಿಗೆ ಹೆಚ್ ಡಿ ಗುಣಮಟ್ಟದ ಕರೆಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಏರ್ ಟೆಲ್ ತಿಳಿಸಿದೆ.
ಸಾಮಾನ್ಯ ಮೊಬೈಲ್ ಪೋನ್ ಗ್ರಾಹಕರ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2 ಜಿ ಸೇವೆಯನ್ನು ಮುಂದುವರೆಸುವುದಾಗಿ ಟೆಲಿಕಾಮ್ ಆಪರೇಟರ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.