ವಾಣಿಜ್ಯ

ಗೋಏರ್ ನಿಂದ 18 ವಿಮಾನ ಸಂಚಾರ ರದ್ದು, ಪ್ರಯಾಣಿಕರಿಗೆ ಅನಾನುಕೂಲ

Lingaraj Badiger

ನವದೆಹಲಿ: ವಿಮಾನ ಹಾಗೂ ನುರಿತ  ಚಾಲಕ ಸಿಬ್ಬಂದಿ ಕೊರತೆಯ ಕಾರಣ ಬೆಂಗಳೂರು,  ದೆಹಲಿ, ಮುಂಬೈ, , ಕೋಲ್ಕತಾ ಮತ್ತು ಪಾಟ್ನಾ ಸೇರಿದಂತೆ 18 ದೇಶಿಯ ವಿಮಾನಗಳ ಸಂಚಾರವನ್ನು ಗೋ ಏರ್ ರದ್ದುಪಡಿಸಿದ್ದು ಪ್ರಯಾಣಿಕರಿಗೆ  ಅನಾನುಕೂಲವಾಗಿದೆ.

ಮುಂಬೈ, ಗೋವಾ, ಬೆಂಗಳೂರು, ದೆಹಲಿ, ಶ್ರೀನಗರ, ಜಮ್ಮು, ಪಾಟ್ನಾ, ಇಂದೋರ್ ಮತ್ತು ಕೋಲ್ಕತ್ತಾ ಸೇರಿದಂತೆ 18 ವಿಮಾನ ಸಂಚಾರವನ್ನು ಗೋಏರ್ ಸೋಮವಾರ ರದ್ದುಗೊಳಿಸಿದೆ. ವಿಮಾನಗಳು ಮತ್ತು ಸಿಬ್ಬಂದಿ ಕೊರತೆ, ಕಾರಣ ಸಂಚಾರ ರದ್ದಾಗಿದೆ  ಎನ್ನಲಾಗಿದೆ. ಆದರೆ  ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಕಾರಣದಿಂದಾಗಿ ಸೇವೆಗೆ ಅಡ್ಡಿ ಉಂಟಾಗಿದೆ ಎಂದು ಗೋಏರ್ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ ಸೋಮವಾರ ರದ್ದಾದ ವಿಮಾನಗಳ ನಿಖರ ಸಂಖ್ಯೆಯನ್ನು ವಿಮಾನ ಸಂಸ್ಥೆ ಬಹಿರಂಗಪಡಿಸಿಲ್ಲ ಇದರ ಜೊತೆಗೆ ದೇಶದ ಕೆಲವು ಭಾಗಗಳಲ್ಲಿನ ಪ್ರತಿಕೂಲ ಹವಾಮಾನ, ಮಂದಬೆಳಕು, ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳು ಸಹ ಇದಕ್ಕೆ ಕಾರಣ ಎನ್ನಲಾಗಿದೆ.

ವಿಮಾನಗಳ ಹಠಾತ್ ರದ್ದತಿಯಿಂದ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲತೆ ಉಂಟಾಗಿದೆ.

ಗೋಏರ್ ಬೆಳಿಗ್ಗೆ ವಿಮಾನ ರದ್ದಾಗಿದೆ ಎಂದು ಸಂದೇಶ ಕಳುಹಿಸಿದೆ. ಕೊನೆ ಘಳಿಕೆಯಲ್ಲಿ ನಾನು ಏನು ಮಾಡಬೇಕು ಎಂದು ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ. ಆದರೂ ಪ್ರಯಾಣಿಕರ ಅನಾನುಕೂಲತೆ ಕಡಿಮೆ ಮಾಡಲು ಸಾಧ್ಯವಿರುವ ಎಲ್ಲ ಉಪಕ್ರಮ ಪ್ರಾರಂಭಿಸುವುದಾಗಿಯೂ ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ.

SCROLL FOR NEXT