ವಾಣಿಜ್ಯ

ಆರ್ಥಿಕ ಹಿಂಜರಿತದಿಂದ ಭಾರತ ಕಳೆದುಕೊಂಡಿದ್ದು ಅದೆಷ್ಟು ಲಕ್ಷ ಕೋಟಿ ಗೊತ್ತೇ?

Srinivas Rao BV

ಆರ್ಥಿಕ ಹಿಂಜರಿತದಿಂದ ಭಾರತಕ್ಕೆ ಉಂಟಾಗಿರುವ ನಷ್ಟದ ಪ್ರಮಾಣವೇನು? ಇದನ್ನು ನಿಖರವಾಗಿ ಹೇಳುವುದು ಕಷ್ಟಸಾಧ್ಯವಾದರೂ ಒಂದು ಅಂದಾಜಿನ ಪ್ರಕಾರ ಬರೊಬ್ಬರಿ 2.8 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆಯಂತೆ. 

ಸಾಮಾನ್ಯವಾಗಿ ಆರ್ಥಿಕ ಬೆಳವಣಿಗೆ ಹಾಗೂ ಕುಸಿತವನ್ನು ಶೇಕಡಾವಾರು ಪ್ರಮಾಣದಲ್ಲಿ ಪರಿಗಣಿಸುತ್ತಾರೆ. ಆದರೆ ವಾಸ್ತವಿಕ ಜಿಡಿಪಿ ಹಾಗೂ ಪೊಟೆನ್ಷಿಯಲ್ ಜಿಡಿಪಿಯ ಸ್ಪಷ್ಟ ವ್ಯತ್ಯಾಸಗಳನ್ನು ಗಮನಿಸಬೇಕಾಗುತ್ತದೆ. ಈ ರೀತಿ ಮಾಡಿದಲ್ಲಿ 2020 ನೇ ಆರ್ಥಿಕ ವರ್ಷಕ್ಕೆ 2.8 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗುತ್ತಿದೆ. 

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ ಇತ್ತೀಚಿನ ಅಂದಾಜಿನ ಪ್ರಕಾರ, ಭಾರತದ ಪೊಟೆನ್ಷಿಯಲ್ ಜಿಡಿಪಿ ಶೇ.7 ರಷ್ಟಿದೆ. ಆದರೆ ಹಲವಾರು ಏಜೆನ್ಸಿಗಳು ಇದನ್ನು ಶೇ.5 ಕ್ಕೆ ಅಂದಾಜಿಸಿವೆ. ಇದರ ಅರ್ಥ ಆರ್ಥಿಕತೆ ಗರಿಷ್ಠ ಮಟ್ಟದಲ್ಲಿದ್ದರೂ 2020 ರ ಜಿಡಿಪಿ 150.63 ಲಕ್ಷ ಕೋಟಿಯಲ್ಲಿರಬೇಕು. ಆದರೆ ಶೇ.5 ರಷ್ಟು ಜಿಡಿಪಿಯಲ್ಲಿ 147.81 ಲಕ್ಷ ಕೋಟಿಯ ಆಸುಪಾಸಿನಲ್ಲಿದ್ದು, 2.8 ಲಕ್ಷ ಕೋಟಿ ರೂಪಾಯಿಯ ನಷ್ಟವನ್ನು ಸೂಚಿಸುತ್ತಿದೆ. 2019 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ 140.78 ಲಕ್ಷ ಕೋಟಿಯಷ್ಟಿತ್ತು.

ಇಷ್ಟೆಲ್ಲದರ ನಡುವೆ ಶುಭ ಸಮಾಚಾರವೇನೆಂದರೆ ಶೇ.5 ರಷ್ಟು ಬೆಳವಣಿಗೆ ದರದಲ್ಲಿಯೂ ಸಹ ನಾವು ಒಂದಷ್ಟು ಪ್ರಮಾಣದ ರಿಯಲ್ ಜಿಡಿಪಿಯನ್ನು ಸೇರಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. 

ಉದಾಹರಣೆಗೆ ಕಳೆದ 7 ವರ್ಷಗಳಲ್ಲಿ ನಾವು ಪ್ರತಿ ವರ್ಷವೂ 8 ಲಕ್ಷ ಕೋಟಿ ರೂಪಾಯಿಗಳನ್ನು ಜಿಡಿಪಿಗೆ ಸೇರಿಸುತ್ತಿದ್ದೆವು.9.8 ಲಕ್ಷ ಕೋಟಿ ಸಾಮರ್ಥ್ಯಕ್ಕೆ ವಿರುದ್ಧವಾಗಿ  2020 ರಲ್ಲಿ ಆರ್ಥಿಕತೆ 7 ಲಕ್ಷ ಕೋಟಿಯಷ್ಟಾಗಲಿದೆ. ಆದರೂ ಸಹ ಇದು ಅತ್ಯಂತ ಕೆಟ್ಟ ಪರಿಸ್ಥಿತಿಯಾಗುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

SCROLL FOR NEXT