ವಾಣಿಜ್ಯ

ಕೆಲವೇ ವಾರಗಳಲ್ಲಿ ಏರ್ ಇಂಡಿಯಾ ಖಾಸಗಿಕರಣಕ್ಕೆ ಮೊದಲ ಹೆಜ್ಜೆ ಇಡಲಿದ್ದೇವೆ: ಹರ್ದೀಪ್ ಪುರಿ 

Raghavendra Adiga

ನವದೆಹಲಿ: ಮುಂಬರುವ ಕೆಲವು ವಾರಗಳಲ್ಲಿ ಏರ್ ಇಂಡಿಯಾ ಖಾಸಗಿಕರಣದ ಮೊದಲ ಹೆಜ್ಜೆಯನ್ನಿಡಲು ತಮ್ಮ ಸಚಿವಾಲಯ ಪ್ರಯತ್ನಿಸುತ್ತದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಪುರಿ ಮಂಗಳವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುರಿ, ತಮ್ಮ ಸಚಿವಾಲಯವು ವಾಯುಯಾನ ಸಂಬಂಧಿತ ಸಚಿವಾಲಯವಾಗಿದ್ದರೂ ಹೂಡಿಕೆ ಉಸ್ತುವಾರಿ ವಹಿಸುವುದಿಲ್ಲ ಎಂದು ಹೇಳಿದ್ದಾರೆ.

"ಏರ್ ಇಂಡಿಯಾ ಪ್ರಥಮ ದರ್ಜೆ ವಿಮಾನಯಾನ ಸಂಸ್ಥೆಯಾಗಿದೆ, ಆದರೆ ಖಾಸಗೀಕರಣವನ್ನು ಮಾಡುವುದರ ಬಗ್ಗೆ ಎರಡನೇ ಅಭಿಪ್ರಾಯಕ್ಕೆ ಅವಕಾಶವಿಲ್ಲ. ನಾವು ಯಾವುದೇ ಕಾಲಮಿತಿಯಲ್ಲಿರಲು ನಾವೇನು ಗುಲಾಮರಲ್ಲ. ನಾವು ಅದೆಷ್ಟು ಸಾಧ್ಯವೋ ಅಷ್ಟು ತುರ್ತಾಗಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು.

"ನಾನು ಮೊದಲೇ ಹೇಳಿದ್ದೆ, ನಮಗೆ ಇದು ಒಂದು ಆಯ್ಕೆಯಲ್ಲ,  ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಬೇಕಾಗಿದೆ. ಕೆಲವು ಸಾಲವನ್ನು ಎದುರಿಸಿದ್ದೇವೆ.  ವಿಮಾನ ದರಗಳು ಯಾವಾಗಲೂ ಮಾರುಕಟ್ಟೆ ಚಾಲಿತವಾಗಿರುತ್ತದೆ, ನಮಗೆ ಅದನ್ನು ನಿಯಂತ್ರಿಸುವ ಯಾವ ಯೋಜನೆ ಇಲ್ಲ"ಪುರಿ ಹೇಳಿದರು.

SCROLL FOR NEXT