ನಿರ್ಮಲಾ ಸೀತಾರಾಮನ್ 
ವಾಣಿಜ್ಯ

ಮುಂದಿನ 5 ವರ್ಷಗಳಲ್ಲಿ 102 ಲಕ್ಷ ಕೋಟಿ ಮೂಲಸೌಕರ್ಯ ಯೋಜನೆ ಜಾರಿ: ನಿರ್ಮಲಾ ಸೀತಾರಾಮನ್

ಮೂಲಸೌಕರ್ಯ ಕ್ಷೇತ್ರದಲ್ಲಿ ಸರಕಾರದ ಖರ್ಚು ಹೆಚ್ಚಳದ ಭಾಗವಾಗಿ ಮುಂದಿನ ಐದು ವರ್ಷಗಳಲ್ಲಿ ಜಾರಿಗೆ ಬರುವಂತೆ  102 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಘೋಷಿಸಿದ್ದಾರೆ.

ನವದೆಹಲಿ: ಮೂಲಸೌಕರ್ಯ ಕ್ಷೇತ್ರದಲ್ಲಿ ಸರಕಾರದ ಖರ್ಚು ಹೆಚ್ಚಳದ ಭಾಗವಾಗಿ ಮುಂದಿನ ಐದು ವರ್ಷಗಳಲ್ಲಿ ಜಾರಿಗೆ ಬರುವಂತೆ  102 ಲಕ್ಷ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ 100 ಲಕ್ಷ ಕೋಟಿ ರೂ. ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ.ತರುವಾಯ, ನಾಲ್ಕು ತಿಂಗಳ ಅಲ್ಪಾವಧಿಯಲ್ಲಿ 70 ಮಧ್ಯಸ್ಥಗಾರರ ಸಮಾಲೋಚನೆ ನಡೆದಿದ್ದು 02 ಲಕ್ಷ ಕೋಟಿ ರೂ. ಯೋಜನೆಗಳನ್ನು ಗುರುತಿಸಲಾಗಿದೆ ಎಂದರು.

ಇಷ್ಟೇ ಅಲ್ಲದೆ ಇದಕ್ಕೆ ಇನ್ನೂ  3 ಲಕ್ಷ ಕೋಟಿ ರೂ. ಯೋಜನೆಗಳನ್ನು ಸೇರಿಸುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು.

ಈ ಯೋಜನೆಗಳು ಕಳೆದ ಆರು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು ಖರ್ಚು ಮಾಡಿದ 51 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನದಾಗಿದೆ, ಹೊಸ ಯೋಜನೆಗಳು ಸೇರಿಸುವುದರಿಂದ ಕೇಂದ್ರ ಮತ್ತು ರಾಜ್ಯಗಳು ತಲಾ 39 ಶೇಕಡಾ ಯೋಜನೆಗಳನ್ನು ಒಳಗೊಂಡಿರುತ್ತವೆ ಮತ್ತು ಉಳಿದವು ಶೇಕಡಾ 22 ರಷ್ಟು ಖಾಸಗಿ ವಲಯಕ್ಕೆ ಸೇರಿರಲಿದೆ ಎಂದರು ಸಚಿವೆ ವಿವರಿಸಿದ್ದಾರೆ.

ವಿದ್ಯುತ್, ರೈಲ್ವೆ, ನಗರ ನೀರಾವರಿ, ಮೊಬಿಲಿಟಿ , ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಗುರುತಿಸಲಾಗಿದೆ.ಸುಮಾರು 25 ಲಕ್ಷ ಕೋಟಿ ಇಂಧನ ಯೋಜನೆಗಳನ್ನು ಪೂರೈಸಲಾಗುತ್ತಿದೆ. ರಸ್ತೆಗಳಲ್ಲಿ ಇನ್ನೂ 20 ಲಕ್ಷ ಕೋಟಿ ರೂ. ಮತ್ತು ಸುಮಾರು 14 ಲಕ್ಷ ಕೋಟಿ ರೈಲ್ವೆ ಯೋಜನೆಗಳು ಸಾಲಾಗಿ ನಿಂತಿವೆ. ನವೀಕರಿಸಬಹುದಾದ ವಲಯ, ರೈಲ್ವೆ, ನಗರಾಭಿವೃದ್ಧಿ, ನೀರಾವರಿ, ಮೊಬಿಲಿಟಿ, ಶಿಕ್ಷಣ, ಆರೋಗ್ಯ, ನೀರು ಮತ್ತು ಡಿಜಿಟಲ್ ಸೇರಿದಂತೆ ಹಲವು ವಲಯಗಳಲ್ಲಿ ಹೊಸ ಯೋಜನೆಗಳು ಬರಲಿದೆ.ಈ ಕ್ಷೇತ್ರಗಳು ರಾಷ್ಟ್ರೀಯ ಮೂಲಸೌಕರ್ಯ ದ ಕ್ಷೇತ್ರದಡಿ ಬರಲಿದ್ದು ಮಂಗಳವಾರ ಘೋಷಣೆಯಾದ  ಹೂಡಿಕೆಯ ಬಹುಭಾಗವನ್ನು ರೂಪಿಸಲಿವೆ ಎಂದು ಸೀತಾರಾಮನ್ ಹೇಳಿದರು.

2025 ರ ವೇಳೆಗೆ ಭಾರತವನ್ನು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು 102 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳು ಸಹಾಯ ಮಾಡುತ್ತವೆ ಎಂದು ಹಣಕಾಸು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT