ಇಂದ್ರಾನೂಯಿ 
ವಾಣಿಜ್ಯ

ಅಮೆಜಾನ್ ನಿರ್ದೇಶಕರ ಮಂಡಳಿ ಸೇರಿದ ಪೆಪ್ಸಿ ಕೋ ಮಾಜಿ ಸಿಇಒ ಇಂದ್ರಾ ನೂಯಿ

ಅನ್ ಲೈನ್ ರಿಟೈಲ್ ದೈತ್ಯ ಕಂಪನಿ ಅಮೆಜಾನ್ ನಿರ್ದೇಶಕರ ಮಂಡಳಿಗೆ ಭಾರತ ಮೂಲದ ಪೆಪ್ಸಿ ಕೋ ಮಾಜಿ ಸಿಇಒ ಇಂದ್ರಾ ನೂಯಿ ಈಗ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ವಾಷಿಂಗ್ಟನ್: ಅನ್ ಲೈನ್  ರಿಟೈಲ್ ದೈತ್ಯ ಕಂಪನಿ ಅಮೆಜಾನ್ ನಿರ್ದೇಶಕರ ಮಂಡಳಿಗೆ ಭಾರತ ಮೂಲದ ಪೆಪ್ಸಿ ಕೋ ಮಾಜಿ ಸಿಇಒ ಇಂದ್ರಾ ನೂಯಿ ಈಗ ಹೊಸದಾಗಿ  ಸೇರ್ಪಡೆಯಾಗಿದ್ದಾರೆ.
ಕಳೆದ ವರ್ಷ ಪೆಪ್ಸಿ ಕೋ ಸಿಇಒ ಸ್ಥಾನದಿಂದ  ವಜಾಗೊಂಡಿದ್ದ ಇಂದ್ರಾ ನೂಯಿ, ಅಮೆಜಾನ್ ಮಂಡಳಿಯ ನಿರ್ದೇಶಕಿ ಸ್ಥಾನಕ್ಕೆ ಸೇರ್ಪಡೆಯಾದ ಎರಡನೇ ಮಹಿಳೆಯಾಗಿದ್ದಾರೆ.ಈ ವರ್ಷದ ಆರಂಭದಲ್ಲಿ ಸ್ಟಾರ್ ಬೂಕ್ಸ್ ಎಕ್ಸಿಕ್ಯೂಟಿವ್ ರೊಸಾಲೈಂಡ್  ಬ್ರೆವೆರ್  ಅಮೆಜಾನ್ ಮಂಡಳಿಗೆ ಸೇರ್ಪೆಡೆಗೊಂಡಿದ್ದರು.
ಈ ತಿಂಗಳಲ್ಲಿ ನಿರ್ದೇಶಕರ ಮಂಡಳಿಗೆ  ಆಯ್ಕೆಯಾದ ಇಂದ್ರಾ ನೂಯಿ ಹಾಗೂ ರೊಸ್ ಬ್ರೆವೆರ್ ಅವರನ್ನು ಸ್ವಾಗತಿಸುವುದಾಗಿ  ಅಮೆಜಾನ್  ಕಂಪನಿ ತಿಳಿಸಿದೆ.  63 ವರ್ಷದ ಇಂದ್ರಾನೂಯಿ ಲೆಕ್ಕ ಪರಿಶೋಧನೆ ಸಮಿತಿಯ ಸದಸ್ಯರಾಗಿದ್ದಾರೆ.
ಇಂದ್ರಾ ನೂಯಿ 2006 ಅಕ್ಟೋಬರ್ ನಿಂದ 2018 ಅಕ್ಟೋಬರ್ ವರೆಗೂ ಪೆಪ್ಸಿ ಕೋ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಮೇ 2007 ರಿಂದ ಫೆಬ್ರವರಿ 2019ರವರೆಗೂ ನಿರ್ದೇಶಕರ ಮಂಡಳಿಯ ಮುಖ್ಯಸ್ಥೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!