ವಾಣಿಜ್ಯ

ಭಾರತದ ಜಿಡಿಪಿ ಶೇ. 6.6ಕ್ಕೆ ಕುಸಿತ, ಐದು ತ್ರೈಮಾಸಿಕದಲ್ಲೇ ಅತ್ಯಂತ ಕಡಿಮೆ

Lingaraj Badiger
ನವದೆಹಲಿ: 2018-19ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ(ಜಿಡಿಪಿ) ದರ ಶೇ.6.62ಕ್ಕೆ ಕುಸಿದಿದ್ದು, ಇದು ಕಳೆದ ಐದು ತ್ರೈಮಾಸಿಕದಲ್ಲೇ ಅತ್ಯಂತ ಕಡಿಮೆಯಾಗಿದೆ.
ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ. 7ರಿಂದ 6.6ಕ್ಕೆ ಕುಸಿದಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ.
ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಗಳ ನಂತರ ತೀವ್ರವಾಗಿ ಕುಸಿತಗೊಂಡಿದ್ದ ದೇಶದ ಜಿಡಿಪಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.8.2 ಕ್ಕೆ ಏರಿಕೆಯಾಗಿತ್ತು. ನಂತರ ಎರಡನೇ ತ್ರೈಮಾಸಿಕದಲ್ಲೂ ಶೇ.7ಕ್ಕೆ ಕುಸಿತ ಕಂಡಿತ್ತು. ಈಗ ಮತ್ತೆ ಕುಸಿದಿದ್ದು, ಇದಕ್ಕೆ ಉತ್ಪಾದನಾ ಹಾಗೂ ಕೃಷಿ ಕ್ಷೇತ್ರದಲ್ಲಿನ ಕುಸಿತವೇ ಕಾರಣ ಎನ್ನಲಾಗಿದೆ.
ಜಿಡಿಪಿ ದರ 2017-18ರ ಆರ್ಥಿಕ ವರ್ಷದ ಕೊನೆ ತ್ರೈಮಾಸಿಕದಲ್ಲಿ ಶೇ. 7.7ರಷ್ಟು, ಮೊದಲ ತ್ರೈಮಾಸಿಕದಲ್ಲಿ ಶೇ. 5.9ರಷ್ಟು ಇತ್ತು.
SCROLL FOR NEXT