ವಾಣಿಜ್ಯ

2018-19ರಲ್ಲಿ ಭಾರತದ ಜಿಡಿಪಿ ಶೇ.7.2 ರಷ್ಟು ವೃದ್ಧಿ ಸಾಧ್ಯತೆ

Lingaraj Badiger
ನವದೆಹಲಿ: 2018-19ರ ಸಾಲಿನಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ(ಜೆಡಿಪಿ) ಶೇ.7.2ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ಕೇಂದ್ರೀಯ ಅಂಕಿ ಅಂಶಗಳ ಸಂಘಟನೆ(ಸಿಎಸ್‌ಒ) ಸೋಮವಾರ ತಿಳಿಸಿದೆ.
2017-18ರಲ್ಲಿನ ಶೇ.6.7ರ ಪ್ರಗತಿಯನ್ನು ಈ ವರ್ಷ ಹಿಂದಿಕ್ಕಲಿದೆ. ಕೃಷಿ ಮತ್ತು ಉತ್ಪಾದನಾ ವಲಯದ ಸುಧಾರಣೆಯ ಪರಿಣಾಮ ಜಿಡಿಪಿ ದರ ಶೇ.7.2ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿದೆ.
ಆರ್ಥಿಕ ವರ್ಷ ಕೊನೆಯಾಗಲು ಸರಿಯಾಗಿ 83 ದಿನಗಳು ಬಾಕಿ ಇರುವಾಗ ತನ್ನ ವಾರ್ಷಿಕ ಅಂದಾಜು ವರದಿ ಬಿಡುಗಡೆ ಮಾಡಿರುವ ಸಿಎಸ್‌ಒ, ಜಿಡಿಪಿ ದರ 7.2%ಕ್ಕೆ ತಲುಪಬಹುದು ಎಂದು ಅಂದಾಜಿಸಿದೆ. 
ಕೃಷಿ, ಅರಣ್ಯ ಮತ್ತು ಮೀನುಗಾರಿಕೆಯಲ್ಲಿ ಬೆಳವಣಿಗೆಯ ಮಟ್ಟ ಶೇ.3.4ರಿಂದ ಶೇ.3.8ಕ್ಕೆ ವೃದ್ಧಿಸಲಿದೆ ಎಂದು ವಿವರಿಸಿದೆ.
ಉತ್ಪಾದನಾ ವಲಯದ ಬೆಳವಣಿಗೆ ಕೂಡ ಶೇ.5.7ರಿಂದ ಶೇ.8.3ಕ್ಕೆ ವೃದ್ಧಿಸುವ ನಿರೀಕ್ಷೆ ಇದೆ. ಜಿಡಿಪಿ ಪ್ರಗತಿಯು 2015-16ರಲ್ಲಿ ಶೇ.8.2, 2016-17ರಲ್ಲಿ ಶೇ.7.1ರಷ್ಟು ಇತ್ತು. 
SCROLL FOR NEXT