ಸಂಗ್ರಹ ಚಿತ್ರ 
ವಾಣಿಜ್ಯ

2 ದಿನ ಭಾರತ್ ಬಂದ್: ದೇಶಾದ್ಯಂತ 20,000 ಕೋಟಿ ಮೌಲ್ಯದ ಚೆಕ್ ಗಳು ಬಾಕಿ

ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿದ್ದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಹ ತಟ್ಟಿದೆ.ಬ್ಯಾಂಕ್ ನೌಕರರ ಮುಷ್ಕರದ ಕಾರಣ ಬರೋಬ್ಬರಿ 20,000 ಕೋಟಿ ಮೌಲ್ಯದ ಚೆಕ್ ಗಳು....

ಚೆನ್ನೈ: ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿದ್ದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಹ ತಟ್ಟಿದೆ.ಬ್ಯಾಂಕ್ ನೌಕರರ ಮುಷ್ಕರದ ಕಾರಣ ಬರೋಬ್ಬರಿ 20,000 ಕೋಟಿ ಮೌಲ್ಯದ ಚೆಕ್ ಗಳು ಕ್ಲಿಯರ್ ಆಗದೆ ಬಾಕಿ ಉಳಿದಿವೆ ಎಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಒಕ್ಕೂಟವಾದ ಅಖಿಲಭಾರತ ಬ್ಯಾಂಕ್ ನೌಕರರ ಒಕ್ಕೂಟ  ​​(ಎಐಬಿಇಎ) ತಿಳಿಸಿದೆ.
ಕೇಂದ್ರ ಸರ್ಕರಾದ ವಿವಿಧ ನೀತಿಗಳ ವಿರೋಧಿಸಿ ಜನವರಿ 8 ಮತ್ತು 9 ರಂದು ದೇಶದಲ್ಲಿ ಕೇಂದ್ರ ಕಾರ್ಮಿಕ ಒಕ್ಕೂಟಗಳು ಎರಡು ದಿನಗಳ ಕಾಲ ಮುಷ್ಕರ ನಡೆಸಿದೆ.ಈ ಕಾರಣದಿಂದ  ಸುಮಾರು 20 ಸಾವಿರ ಕೋಟಿ ರೂ. ಮೌಲ್ಯದ ಚೆಕ್ ಗಳು ದೇಶದಾದ್ಯಂತ ಕ್ಲಿಯರ್ ಆಗದೆ ಬಾಕಿ ಉಳಿದಿವೆ ಎಂದು ಎಐಬಿಇಎ ಹೇಳಿದೆ.
"ಬ್ಯಾಂಕುಗಳಲ್ಲಿನ ಅಧಿಕಾರಿಗಳು ಮುಷ್ಕರಕ್ಕೆ ಸೇರದಿದ್ದರೂ, ಅವರು ನೈತಿಕ ಬೆಂಬಲ ನೀಡಿದ್ದಾರೆ.ಆದ್ದರಿಂದ ಶಾಖೆಗಳನ್ನು ತೆರೆದಿದ್ದರೂ, ನಗದು ವ್ಯವಹಾರಗಳಂತಹ ಸಾಮಾನ್ಯ ಬ್ಯಾಂಕಿಂಗ್ ಸೇವೆಗಳುತಪಾಸಣೆ, ಹಣ ರವಾನೆ, ಬಿಲ್ಲುಗಳನ್ನು ಪಾಸು ಮಾಡುವುದು ಸೇರಿ ಹಲವು ಹಣಕಾಸಿನ ವ್ಯವಹಾರಗಳ ಮೇಲೆ ಪರಿಣಾಮವಾಗಿದೆ" ಎಂದು ಹೇಳಿಕೆ ತಿಳಿಸಿದೆ.
ಬ್ಯಾಂಕುಗಳಲ್ಲಿ ಅತಿ ಹೆಚು ಪ್ರಮಾಣದ ಕೆಟ್ಟ ಸಾಲಗಳು (ಬ್ಯಾಡ್ ಲೋನ್) ಗಳಿರುವುದು ದೊಡ್ಡ ಸಮಸ್ಯೆಯಾಗಿದೆ. ಸೇಶದಾದ್ಯಂತ ಬ್ಯಾಂಕ್ ಗಳಲ್ಲಿ  13 ಲಕ್ಷ ಕೋಟಿ ರೂ. ಕೆಟ್ಟ ಸಾಲಗಳಿವೆ. ಇದರಿಂದ 21 ಸಾರ್ವಜನಿಕ ಬ್ಯಾಂಕ್ ಗಳಲ್ಲಿ 19  ಬ್ಯಾಂಕುಗಳು ನಿವ್ವಳ ನಷ್ಟದಲ್ಲಿವೆ. ಮಾರ್ಚ್ 31, 2018 ರ ವೇಳೆಗೆ ಅವುಗಳು ಕೇವಲ 155,585 ಕೋಟಿ ರೂ. ಲಾಭ ಗಳಿಸಿವೆ.
ಈ ಬ್ಯಾಂಕುಗಳು ರೂ. 240,956 ಕೋಟಿ ಮೊತ್ತದ ಕೆಟ್ಟ ಸಾಲ ಹಾಗೂ ಇತರೆ ಸಾಲಗಳನ್ನು ನೀಡಿದ್ದು ಇದರಿಂದ 85,371 ಕೋಟಿ ರೂ. ನಷ್ಟವಾಗುವಂತಾಗಿದೆ ಎಂದು ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!