ವಾಣಿಜ್ಯ

ಕೇಂದ್ರದಿಂದ ಶೀಘ್ರವೇ ಉಡಾನ್-3 ಯೋಜನೆ: ವಿದೇಶಗಳಿಗೆ ಅಗ್ಗದ ಟಿಕೆಟ್ ದರ ಕೇಳಿದರೆ ದಂಗಾಗುತ್ತೀರ!

Srinivas Rao BV
ನವದೆಹಲಿ: ಅಗ್ಗದ ದರದಲ್ಲಿ ಭಾರತದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ಅಗ್ಗದ ದರದಲ್ಲಿ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರವನ್ನು ನಿಗದಿಪಡಿಸಲು ಮುಂದಾಗಿದೆ. 
ಈ ಭಾಗವಾಗಿ ಉಡಾನ್-3 ನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಎಲ್ಲಾ ಸಿದ್ಧತೆ ನಡೆಸಿದ್ದು ಕೇವಲ 2,500 ರೂಪಾಯಿಗಳಿಗೆ ವಿದೇಶಗಳಿಗೆ ಹಾರಬಹುದಾಗಿದೆ. ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ ಅಸ್ಸಾಂ ಉಡಾನ್ ಯೋಜನೆಯಡಿ ಬ್ಯಾಂಕಾಕ್ ಥಾಯ್ ಲ್ಯಾಂಡ್, ಕಠ್ಮಂಡುಗಳಿಗೆ ಅಗ್ಗದ ದರದಲ್ಲಿ ವಿಮಾನ ಸಂಪರ್ಕ ಹೊಂದಿರಲಿದೆ. 
ಇದೇ ಮಾದರಿಯಲ್ಲಿ ಬಿಹಾರ ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳು ನೇಪಾಳ, ಬಾಂಗ್ಲಾದೇಶ, ಮಾಯನ್ಮಾರ್ ಗೆ ಹಾಗೂ ಚೆನ್ನೈ ನಲ್ಲಿರುವ ವಿಮಾನ ನಿಲ್ದಾಣಗಳು ಸಿಂಗಪೂರ್ ಗೆ ಅಗ್ಗದ ದರದಲ್ಲಿ ಸಂಪರ್ಕ ಕಲ್ಪಿಸಲಿವೆ. 
SCROLL FOR NEXT