ವಾಣಿಜ್ಯ

31,000 ಕೋಟಿ ರೂ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ಷೇರು ಶೇ.8 ರಷ್ಟು ಕುಸಿತ!

Srinivas Rao BV
ಮುಂಬೈ: ಡಿಹೆಚ್ಎಲ್ಎಫ್ ಪ್ರೊಮೋಟರ್ ಗಳಿಂದ 31,000 ಕೋಟಿ ರೂಪಾಯಿ ಹಗರಣದ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ನ ಷೇರುಗಳು ಶೇ.8 ರಷ್ಟು ಕುಸಿತ ಕಂಡಿವೆ. 
ಬಿಎಸ್ಇ ನಲ್ಲಿ ಶೇ.8 ರಷ್ಟು ಕುಸಿದಿದ್ದು, ಈ ಹಿಂದೆ 184.85 ರೂಪಾಯಿ ಇದ್ದ ಮೌಲ್ಯ ಈಗ 170.05 ರೂಪಾಯಿಗಳಿಗೆ ಇಳಿಕೆಯಾಗಿದೆ. ಡಿಹೆಚ್ಎಫ್ಎಲ್ 1984 ರಲ್ಲಿ ಸ್ಥಾಪಿಸಲಾಗಿದ್ದ ಸಂಸ್ಥೆಯಾಗಿದ್ದು, ಮಧ್ಯಮ ಹಾಗೂ ಕೆಳಮಧ್ಯಮ ವರ್ಗಗಳಿಗೆ ಆರ್ಥಿಕ ಲಭ್ಯತೆಯನ್ನು ನೀಡುವುದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯಾಗಿದೆ.
SCROLL FOR NEXT