ವಾಣಿಜ್ಯ

2018ರ ಡಿಸೆಂಬರ್‌ನಲ್ಲಿ ಬರೋಬ್ಬರಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡ ಏರ್‌ಟೆಲ್!

Vishwanath S
ದೇಶದ ನಂಬರ್ ಒನ್ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್ 2018ರ ಡಿಸೆಂಬರ್‌ನಲ್ಲಿ ಬರೋಬ್ಬರಿ 5.7 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ ಎಂಬ ಆಘಾತಕಾರಿ ಸುದ್ದಿ ಹೊರಬಂದಿದೆ.
ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಪ್ರಕಾರ ಕಳೆದ ನವೆಂಬರ್ ತಿಂಗಳ ಅಂತ್ಯದಲ್ಲಿ ಏರ್‌ಟೆಲ್ 34.1 ಕೋಟಿ ಗ್ರಾಹಕರನ್ನು ಹೊಂದಿತ್ತು. ಆದರೆ ಒಂದು ತಿಂಗಳಲ್ಲೇ ಆ ಸಂಖ್ಯೆ ಇಳಿದಿದ್ದು ಸದ್ಯ ಏರ್‌ಟೆಲ್ ಬಳಿ 28.42 ಕೋಟಿ ಗ್ರಾಹಕರಿದ್ದಾರೆ.
ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ್ದು ಉಚಿತ ಡೇಟಾ ಯೋಜನೆ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಏರ್‌ಟೆಲ್ ಗ್ರಾಹಕರು ಜಿಯೋ ಗ್ರಾಹಕರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
SCROLL FOR NEXT