ಬೆಂಗಳೂರು: ಕರ್ನಾಟಕ ಕೇಂದ್ರ ತೆರಿಗೆ ವಲಯವು 2018-19ನೇ ಸಾಲಿನ (ಏಪ್ರಿಲ್ 2018 ರಿಂದ ಮಾರ್ಚ್ 2019 ರವರೆಗೆ) ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಕಾರ್ಯಕ್ಷಮತೆ ತೊರಿದ್ದು ತೆರಿಗೆದಾರರಿಂದ 38,374 ಕೋಟಿ ರೂ ಸಂಗ್ರಹಿಸಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ (ಜುಲೈ 2017 ರಿಂದ ಮಾರ್ಚ್ 2018 ರವರೆಗೆ) ರಾಜ್ಯದಲ್ಲಿ ಸಂಗ್ರಹಿಸಿದ ಆದಾಯ ಈ ಬಾರಿ ಶೇಕಡಾ 23 ರಷ್ಟು ಹೆಚ್ಚಾಗಿದೆ.
ಮಾರ್ಚ್ 31, 2019 ರ ವೇಳೆಗೆ ಕೇಂದ್ರ ಸರ್ಕಾರವು ಗಮನಿಸಿರುವ ತೆರಿಗೆದಾರರ ಸಂಖ್ಯೆ 2,86,949 ರಷ್ಟಿದೆ.ಇದು ಈ ಹಿಂದೆ ಪರೋಕ್ಷ ತೆರಿಗೆ ಕಟ್ಟುತ್ತಿದ್ದ ತೆರಿಗೆ ದಾರರ ಸಂಖೆಯ್ಗಿಂತ ಮೂರು ಪಟ್ಟು ಹೆಚ್ಚಾಗಿದೆ.
ಇದೇ ವೇಳೆ ಈ ವರ್ಷ ಕರ್ನಾಟಕ ವಲಯದಲ್ಲಿ 475 ತೆರಿಗೆ ಅಪರಾಧ ಪ್ರಕರಣಗಳು ವರದಿಯಾಗಿದೆ.2018-19, ಇದರಲ್ಲಿ ಕೇಂದ್ರ ಅಬಕಾರಿ, ಸೇವಾ ತೆರಿಗೆ ಮತ್ತು ಜಿಎಸ್‌ಟಿ ತೆರಿಗೆ ತಪ್ಪಿಸಿಕೊಳ್ಳುವಿಕೆ ಸೇರಿದ್ದ ಅಪರಾಧಗಳ ಸಂಖ್ಝ್ಯೆ ಇದಾಗಿದ್ದು ಇಂತಹ ವಂಚನೆಗಳ ಕಾರಣದಿಂದ ಪತ್ತೆಯಾದ ಒಟ್ಟು ಮೊತ್ತ 1,296.83 ಕೋಟಿ ರೂ ಆಗಿದ್ದು ಇದರಲ್ಲಿ 383.30 ಕೋಟಿ ರೂ.ರಿಕವರಿ ಆಗಿದೆ.
"ಈ ವಲಯದಲ್ಲಿ ತೆರಿಗೆದಾರರ ಸೌಲಭ್ಯ ಸೇವೆಗಳು ಉತ್ತಮವಾಗಿದೆ. ತೆರಿಗೆದಾರರ ನೆರವಿಗಾಗಿ ಜಿಎಸ್ಟಿ ಸೇವಾ ಕೇಂದ್ರವು ವಲಯ ಪ್ರಧಾನ ಕಚೇರಿ ಹಾಗೂ ಪ್ರತಿ ಕಮಿಷನರೇಟ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.ಎಂಎಸ್‌ಎಂಇಗಳು ಎದುರಿಸುತ್ತಿರುವ ಜಿಎಸ್‌ಟಿ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾನೂನು ಮತ್ತು ನಿಯಮಗಳ ಬದಲಾವಣೆಗಳ ಬಗ್ಗೆ ಸೂಕ್ಷ್ಮ ದೃಷ್ಟಿ ಬೀರುವುದಕ್ಕೆ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ."ಒಂದೇ ಮರುಪಾವತಿ ಪ್ರಕ್ರಿಯೆ ಮತ್ತು ಏಕೀಕೃತ ನಗದು ಲೆಡ್ಜರ್ ಮತ್ತು ವ್ಯವಹಾರಗಳಿಗೆ ಇ-ಇನ್ವಾಯ್ಸಿಂಗ್ ವ್ಯವಸ್ಥೆಯನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರುವ ನಿರೀಕ್ಷೆ ಇದೆ. ಇದು ತೆರಿಗೆದಾರರಿಗೆ ತೆರಿಗೆ ಪಾವತಿ ಕ್ರಮವನ್ನು ಇನ್ನಷ್ಟು ಸುಲಭವಾಗಿಸಲಿದೆ. ಮತ್ತು ತೆರಿಗೆ ಆಡಳಿತದಲ್ಲಿ ದಕ್ಷತೆಗೆ ದಾರಿ ಮಾಡಿಕೊಡುತ್ತದೆ" ಎಂದು ಕೇಂದ್ರ ತೆರಿಗೆ ಬೆಂಗಳೂರು ವಲಯದ ಪ್ರಧಾನ ಮುಖ್ಯ ಆಯುಕ್ತರಾದ ಡಿಪಿ ನಾಗೇಂದ್ರ ಕುಮಾರ್.ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos