ವಾಣಿಜ್ಯ

ಚಿಲ್ಲರೆ ಹಣದುಬ್ಬರ ಜೂನ್ ನಲ್ಲಿ ಶೇ.3.18ಕ್ಕೆ ಏರಿಕೆ

Lingaraj Badiger
ನವದೆಹಲಿ: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಕಳೆದ ಆರು ತಿಂಗಳಿಂದ ಏರು ಗತಿಯಲ್ಲಿ ಸಾಗುತ್ತಿರುವ ಚಿಲ್ಲರೆ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇ.3.18ಕ್ಕೆ ಏರಿಕೆಯಾಗಿದೆ.
ಕಳೆದ ಜನವರಿ ಶೇ. 1.97ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಏರುಗತಿಯಲ್ಲಿ ಸಾಗುತ್ತಿದ್ದು, ಮೇ ತಿಂಗಳಲ್ಲಿ ಶೇ.3.05ರಷ್ಟು ಇತ್ತು. ಇದೀಗ ಶೇ.3.18ಕ್ಕೆ ಏರಿಕೆಯಾಗುವ ಮೂಲಕ ಕಳೆದ ಏಳು ತಿಂಗಳಲ್ಲಿನ ಗರಿಷ್ಠ ಮಟ್ಟ ತಲುಪಿದೆ.
ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ.2.99ರಷ್ಟಿತ್ತು. 2018ರ ಮೇನಲ್ಲಿ ಶೇ.4.87ರಷ್ಟಿತ್ತು. 2018ರ ಅಕ್ಟೋಬರ್‌ನಲ್ಲಿ ಶೇ.3.38ಕ್ಕೆ ಇಳಿದಿತ್ತು. ಇದಕ್ಕೆ ಹೋಲಿಸಿದರೆ, ಪ್ರಸಕ್ತ ಸಂದರ್ಭದಲ್ಲಿ ಕಡಿಮೆಯಾಗಿದೆ. 
ಚಿಲ್ಲರೆ ಹಣದುಬ್ಬರವು ಆರ್ಥಿಕತೆ ಅಂಶಗಳಲ್ಲಿ ಪ್ರಮುಖವಾದುದು. ಇದರ ಮೇಲೆ ಆರ್‌ಬಿಐ ಸತತ ನಿಗಾ ಇಟ್ಟಿರುತ್ತದೆ.
SCROLL FOR NEXT