ವಾಣಿಜ್ಯ

ಶಿಕ್ಷಕನಾಗಿದ್ದ ಬೈಜು ರವೀಂದ್ರನ್ ಈಗ ಭಾರತದ ಹೊಸ ಬಿಲಿಯನೇರ್!

Lingaraj Badiger
ಒಬ್ಬ ಸಾಮಾನ್ಯ ಶಿಕ್ಷಕರಾಗಿದ್ದ ಬೈಜು ರವೀಂದ್ರನ್ ಅವರು ಈಗ ಭಾರತದ ಹೊಸ ಬಿಲಿಯನೇರ್ ಆಗಿ ಉದಯಿಸಿದ್ದು, ಅವರು ಅಭಿವೃದ್ಧಿ ಪಡಿಸಿದ್ದ ಎಜ್ಯುಕೆಶನ್ ಆಪ್ ಕೇವಲ ಏಳು ವರ್ಷಗಳಲ್ಲಿ ಸುಮಾರು 6 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಶಿಕ್ಷಣ ಕಲಿಕಾ ಆಪ್ 'ಬೈಜುಸ್' ಸಿಇಒ ಆಗಿರುವ ಬೈಜು ರವೀಂದ್ರನ್ ಅವರು ದೇಶದ ಹೊಸ ಬಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಬೈಜುಸ್ ಕಂಪನಿ ಈ ತಿಂಗಳ ಆರಂಭದಲ್ಲಿ 150 ಮಿಲಿಯನ್ ಫಂಡಿಂಗ್ ಗಳಿಸಿದ ನಂತರ ಈ ಸಾಧನೆಗೆ ಭಾಜನರಾಗಿದ್ದಾರೆ. ಈ ಒಪ್ಪಂದದ ಮೂಲಕ ಸಂಸ್ಥೆ 5.7 ಬಿಲಿಯನ್ ಪಡೆದಿದೆ.
ಸಿಇಒ ಹಾಗೂ ಸಂಸ್ಥಾಪಕರು ಆಗಿರುವ ಬೈಜು ರವೀಂದ್ರನ್ ಅವರು ಕಂಪನಿಯಲ್ಲಿ ಶೇ. 21ಕ್ಕಿಂತ ಹೆಚ್ಚು ಮೌಲ್ಯ ಹೊಂದಿದ್ದಾರೆ. ಬೈಜುಸ್ ತನ್ನ ಸೇವೆಯನ್ನು 2020 ರ ಹೊತ್ತಿಗೆ ಅಮೇರಿಕಾಗೆ ವಿಸ್ತರಿಸಲಿದೆ.
ಮೌಸ್ ಹೌಸ್ ಮನರಂಜನೆಗಾಗಿ ಏನು ಮಾಡಿದೆ ಅದನ್ನು ಭಾರತೀಯ ಶಿಕ್ಷಣಕ್ಕಾಗಿ ಮಾಡಬೇಕೆಂದು ಹೇಳಿದ್ದ 37 ವರ್ಷದ ಉದ್ಯಮಿ ಬೈಜು, ಈಗ ಭೌಗೋಳಿಕವಾಗಿ ಮತ್ತು ಸೃಜನಾತ್ಮಕವಾಗಿ ಅತಿ ದೊಡ್ಡ ಹೆಜ್ಜೆ ಇಡುತ್ತಿದ್ದಾರೆ.
ಎಂಜಿನಿಯರ್ ಆಗಿದ್ದ ಬೈಜು ರವೀಂದ್ರನ್ ಅವರು, ದೇಶದ ಉನ್ನತ ಎಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಶಾಲೆಗಳ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಸ್ನೇಹಿತರಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ಇವರ ಬೋಧನೆ ಎಷ್ಟರಮಟ್ಟಿಗೆ ಪ್ರಸಿದ್ದಿ ಪಡೆಯಿತೆಂದರೆ ಕ್ರೀಡಾಂಗಣಗಳಲ್ಲಿ ಸಾವಿರಾರು ಜನರನ್ನು ಕಲಿಸಲು ಪ್ರಾರಂಭಿಸುವವರೆಗೂ ತರಗತಿಗಳು ಹೆಚ್ಚಾದವು. ವಾರಾಂತ್ಯದಲ್ಲಿ ಅನೇಕ ನಗರಗಳಲ್ಲಿ ಬೋಧನ ತರಗತಿಗಳು ನಡೆಯುತ್ತಿದ್ದರು. ಅವರು 2011 ರಲ್ಲಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವ ಮೊದಲು ಆನ್‌ಲೈನ್ ಪಾಠಗಳನ್ನು ನೀಡಲು ಮುಂದಾದರು. 2011 ರಲ್ಲಿ ಥಿಂಕ್ & ಲರ್ನ್ ಅನ್ನು ಸ್ಥಾಪಿಸಿದರು. ಇದಕ್ಕೆ 35 ಮಿಲಿಯನ್‌ಗಿಂತಲೂ ಹೆಚ್ಚು ಜನ ಸೈನ್ ಅಪ್ ಮಾಡಿದ್ದಾರೆ. ಅವರಲ್ಲಿ ಸುಮಾರು 2.4 ಮಿಲಿಯನ್ ಜನರು ವಾರ್ಷಿಕ 10,000 ರಿಂದ 12,000 ರೂ.ಗಳನ್ನು ಪಾವತಿಸುತ್ತಾರೆ.
SCROLL FOR NEXT