ವಾಣಿಜ್ಯ

ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ ಮತ್ತೆ ಕಾಫಿ ಡೇ ಷೇರುಗಳ ಮೌಲ್ಯ ಕುಸಿತ

Srinivasamurthy VN
ಮುಂಬೈ: ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಸಾವಿನ ಬೆನ್ನಲ್ಲೇ ಅವರ ಸಂಸ್ಥೆಯ ಷೇರುಗಳ ಮೌಲ್ಯ ಸತತ 2ನೇ ದಿನವೂ ಕುಸಿತ ಕಂಡಿದೆ.
ಮುಂಬೈ ಷೇರುಪೇಟೆಯ ಬುಧವಾರದ ವಹಿವಾಟಿನಲ್ಲಿಯೂ ಕಾಫಿ ಡೇ ಕಂಪನಿಯ ಷೇರುಗಳು ಶೇ.19.98ರಷ್ಟು ಕುಸಿದಿದ್ದು,  ಷೇರಿನ ಒಟ್ಟು ಮೌಲ್ಯದಲ್ಲಿ 30.65 ರೂ. ಕುಸಿಯುವುದರೊಂದಿಗೆ ರು.122.75 ದರದಲ್ಲಿ ವಹಿವಾಟು ನಡೆಯುತ್ತಿದೆ. ಮಂಗಳವಾರ ಕೂಡ ಕಾಫಿ ಡೇ ಷೇರುಗಳ ಮೌಲ್ಯದಲ್ಲಿ ಶೇ.20ರಷ್ಟು ಕುಸಿತ ಕಂಡಿತ್ತು. 
ಇನ್ನು ಇಂದಿನ ಷೇರು ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ 83.84 ಅಂಕಗಳ ಕುಸಿತ ಕಂಡಿದ್ದು, ಸೆನ್ಸೆಕ್ಸ್ 37,313.39 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ. ಅಂತೆಯೇ ನಿಫ್ಚಿ ಕೂಡ 25.50 ಅಂಕಗಳ ಕುಸಿತದೊಂದಿಗೆ 11,057.75 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಭಾರತೀಯ ಉದ್ಯಮವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕಾಫಿ ಡೇ ಶೇರುಗಳ ಕುಸಿತವೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
SCROLL FOR NEXT