ವಾಣಿಜ್ಯ

ಐಎಲ್ ಆಂಡ್ ಎಫ್‌ಎಸ್ ಅಕ್ರಮ: ಇಡಿನಿಂದ ಇಬ್ಬರು ಮಾಜಿ ಅಧಿಕಾರಿಗಳ ಬಂಧನ

Raghavendra Adiga
ನವದೆಹಲಿ: ಐಎಲ್ ಆಂಡ್ ಎಫ್ಎಸ್ ಆರ್ಥಿಕ ಅಕ್ರಮಗಳ ಪ್ರಕರಣದಲ್ಲಿ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಇಬ್ಬರು ಮಾಜಿ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನಿಯ ಮಾಜಿ ಜಂಟಿ ಎಂಡಿ ಅರುಣ್ ಕೆ ಸಹಾ ಮತ್ತು ಸಾರಿಗೆ ಜಾಲದ ಎಂಡಿ ಕೆ ರಾಮ್‌ಚಂದ್ ಅವರನ್ನು ಮುಂಬೈನಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮೊದಲ ಬಂಧನಗಳಿದಾಗಿದೆ.ಇವರಿಬ್ಬರನ್ನು ಗುರುವಾರ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಸಂಸ್ಥೆ ಈ ವರ್ಷದ ಫೆಬ್ರವರಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಕಲಿಸಿದ್ದಲ್ಲದೆ ಹೆಚ್ಚುವರಿ ಸಾಕ್ಷ್ಯಗಳನ್ನು ಪಡೆಯುವ ಸಲುವಾಗಿ ಹಲವಾರು ಮಾಜಿ ಅಧಿಕಾರಿಗಳ ಮೇಲೆ ಎರಡು ಬಾರಿ ದಾಳಿ ನಡೆಸಿತ್ತು.
ಸೆಪ್ಟೆಂಬರ್, 2018 ರಿಂದ ಅದರ ಸಮೂಹ ಕಂಪೆನಿಗಳು ಡೀಫಾಲ್ಟ್ ಮಾಡಿದ ನಂತರ ಸಾಲದ ಬಿಕ್ಕಟ್ಟು ಬೆಳಕಿಗೆ ಬಂದಿತು.ಐಎಲ್ ಆಂಡ್ ಎಫ್ಎಸ್ ಎಸ್ಐಡಿಬಿಐಗೆ ಸಾಲವನ್ನು ಪಾವತಿಸುವಲ್ಲಿ ವಿಫಲವಾಗಿದೆ ಮತ್ತು ಅದರ ಅಂಗಸಂಸ್ಥೆಗಳೊಂದಿಗೆ ಒಟ್ಟು 91,000 ಕೋಟಿ ಡಾಲರ್ ಸಾಲವನ್ನು ಹೊಂದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ ಸಲ್ಲಿಸಿದ್ದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ತನಿಖೆ ನಡೆಸಿದೆ.
SCROLL FOR NEXT