ವಾಣಿಜ್ಯ

ಬೆಂಗಳೂರಿನ ಏರೋಸ್ಪೇಸ್ ಸ್ಟಾರ್ಟ್ಅಪ್ ಗೆ ನಟಿ ದೀಪಿಕಾ ಪಡುಕೋಣೆ ಹಣ ಹೂಡಿಕೆ

Raghavendra Adiga
ಬೆಂಗಳೂರು: ನಗರದ ಸ್ಟಾರ್ಟ್ ಅಪ್ ಉದ್ಯಮ ಐಐಎಸ್ಸಿಯ ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಡೆವಲಪ್ಮೆಂಟ್ (ಎಸ್ಐಡಿ) ಪ್ರಾಥಮಿಕ ಸುತ್ತಿನಲ್ಲಿ 3 ಮಿಲಿಯನ್ ಹಣವನ್ನು ಸಂಗ್ರಹಿಸಿದೆ ವಿಶೇಷವೆಂದರೆ ಈ ಸಂಸ್ಥೆಯಲ್ಲಿ ಬೆಂಗಳೂರು ಮೂಲದ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸಹ ಹಣ ಹೂಡಿಕೆ ಮಾಡಿದ್ದಾರೆ.
ನಗರದ ಯುವ ಇಂಜಿನಿಯರ್ ಗಳ ತಂಡ 2015 ರಲ್ಲಿ ಸ್ಥಾಪಿಸಿದ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್, ​​ಸುಧಾರಿತ ಬಾಹ್ಯಾಕಾಶ ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ರಾಕೆಟ್ ಪ್ರೊಪಲ್ಷನ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ.ಕಂಪನಿ ಬಾನುವಾರ ತನ್ನ ಬಂಡವಾಲದ ಮೊತ್ತವನ್ನು ಬಯಲು ಮಾಡಿದೆ.ಐಡಿಎಫ್‌ಸಿ-ಪರಂಪಾರಾ, ಸ್ಟಾರ್ಟ್ಅಪ್ ಎಕ್ಸ್‌ಸೀಡ್, ಕಾರ್ಸೆಮ್‌ವೆನ್ ಫಂಡ್ ಮತ್ತು ಸುರ್ವಂ ಪಾರ್ಟ್‌ನರ್ಸ್ ನೇತೃತ್ವದಲ್ಲಿ ಕೆಲಸ ಮಾಡುವುದಾಗಿ ಪ್ರಕಟಿಸಿದೆ.
ಹೂಡಿಕೆ ಮಾಡಿರುವ ಪ್ರಮುಖ ಹೂಡಿಕೆದಾರರು ದೀಪಿಕಾ ಪಡುಕೋಣೆ (ಕೆಎ ಎಂಟರ್ಪ್ರೈಸಸ್ ಎಲ್ ಎಲ್ ಪಿ ಮೂಲಕ), ಗ್ರೋಎಕ್ಸ್ ವೆಂಚರ್ಸ್, ಸಿಐಐಇ ಇನಿಶಿಯೇಟಿವ್ಸ್ (ಐಐಎಂ ಅಹಮದಾಬಾದ್ ನಲ್ಲಿ  ಇನ್ಕ್ಯುಬೇಟರ್) ಮತ್ತು ಸಿನ್ (ಐಐಟಿ ಬಾಂಬೆಯಲ್ಲಿ ಇನ್ಕ್ಯುಬೇಟರ್)" ಎಂದು ಕಂಪನಿ ತಿಳಿಸಿದೆ.
ಕಂಪನಿಯ ವಕ್ತಾರರು, “ಈ ಹಣವು ಶೀಘ್ರದಲ್ಲೇ ನಮ್ಮ ಉತ್ಪನ್ನಳಿಗೆ ಅರ್ಹತೆ ಪಡೆಯಲು ಸಹಾಯ ಮಾಡುತ್ತದೆ. ಮುಂಬರುವ ತಿಂಗಳುಗಳಲ್ಲಿ, ನಾವು ನಮ್ಮ ಯೋಜನೆಯನ್ನು ಕಠಿಣ ಅರ್ಹತಾ ಪರೀಕ್ಷೆಗಳೊಡನೆ ಪ್ರಾರಂಭಿಸಲಿದ್ದೇವೆ. ನಮ್ಮ ಉತ್ಪನ್ನಗಳು ಹೆಚ್ಚು ಜನರನ್ನು ತಲುಪುವ ಕುರಿತಂತೆ  ಪ್ರಮುಖ ಆವಿಷ್ಕಾರಗಳ ಬಗ್ಗೆಯೂ ಕೆಲಸ ಮಾಡುತ್ತೇವೆ. ನಾವು ಪ್ರಮುಖ ಜಾಗತಿಕ ಸ್ಥಳಗಳಿಗೆ ಯೋಜನೆ ವಿಸ್ತರಿಸಲಿದ್ದೇವೆ. 
"ಇಂದು, ಬಾಹ್ಯಾಕಾಶ ಉದ್ಯಮವು ಜಾಗತಿಕ ಹೊಸ ಬಾಹ್ಯಾಕಾಶ ಕಂಪನಿಗಳೊಂದಿಗಿನ ಅವಕಾಶಗಳ ಆಗರವಾಗಿದೆ.ಪ್ರತಿಯೊಂದು ಕಂಪನಿಯೂ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ.ನಾವು ಎಲ್ಲವನ್ನು ಒಟ್ಟಾಗಿರಿಸಲು, ಪರಿಸರ ವ್ಯವಸ್ಥೆ ಕಾಪಾಡಿಕೊಳ್ಲಲು ಸಹಕರಿಸುತ್ತದೆ. ಭಾರತದಿಂದ ನಾವು ವೇಗವಾಗಿ ಮತ್ತು ಮಿತವ್ಯಯದ ನಾವೀನ್ಯತೆಗಳಲ್ಲಿ ನಮ್ಮ ಸಾಮರ್ಥ್ಯಗಳನ್ನು ತೋರಲಿದ್ದೇವೆ. ಇದಕ್ಕಾಗಿ ನಾವುಗಳು ಇಸ್ರೋ ಮತ್ತು ಐಐಎಸ್‌ಸಿಗಳಿಂದ ಸ್ಫೂರ್ತಿ ಪಡೆಯುತ್ತೇವೆ, ”ಎಂದು ಅವರು ಹೇಳಿದರು. 
SCROLL FOR NEXT