ವಾಣಿಜ್ಯ

ಹತ್ತು ದಿನಗಳಲ್ಲಿ ರಾಷ್ಟ್ರೀಯ ಚಿಲ್ಲರೆ ನೀತಿ ಕರಡು ಬಿಡುಗಡೆ: ಕೇಂದ್ರ ಸರ್ಕಾರ

Nagaraja AB
ನವದೆಹಲಿ: ಮುಂದಿನ ಹತ್ತು ದಿನಗಳಲ್ಲಿ ರಾಷ್ಟ್ರೀಯ  ಚಿಲ್ಲರೆ ನೀತಿಯ ಕರಡನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇಂದು ಹೇಳಿದೆ.
ವ್ಯಾಪಾರಿ ಕ್ಷೇತ್ರಗಳಿಂದ ಅಭಿಪ್ರಾಯಗಳನ್ನು ಕೋರಲು ಮುಂದಿನ ಹತ್ತು ದಿನಗಳಲ್ಲಿ ರಾಷ್ಟ್ರೀಯ ರೀಟೇಲ್ ನೀತಿಯ ಕರಡನ್ನು ಬಿಡುಗಡೆ ಮಾಡಲಾಗುವುದು ಎಂದು ಡಿಫಿಐಐಟಿ ಕಾರ್ಯದರ್ಶಿ ರಮೇಶ್ ಅಭಿಷೇಕ್ ಹೇಳಿದ್ದಾರೆ.
ವಾಣಿಜ್ಯ ಸಚಿವಾಲಯವು ರಾಷ್ಟ್ರೀಯ ಚಿಲ್ಲರೆ ನೀತಿ ಕುರಿತು ವ್ಯಾಪಾರ ಸಂಘಗಳೊಂದಿಗೆ ಚರ್ಚಿಸಲು ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಚಿಲ್ಲರೆ ವ್ಯಾಪಾರದ ಮೂಲ ವಾಸ್ತವತೆಗಳನ್ನು ಅರ್ಥ ಮಾಡಿಕೊಳ್ಳಲು ಸರ್ಕಾರವು ಎಲ್ಲ ಹಂತದಲ್ಲೂ ಪ್ರಯತ್ನಿಸಿದೆ ಮತ್ತು ಅದಕ್ಕನುಗುಣವಾಗಿ ವ್ಯಾಪಾರಿಗಳನ್ನು ಸಂಕಷ್ಟಗಳಿಂದ ಮುಕ್ತಗೊಳಿಸಲು ಮತ್ತು ಆಯಾ ವ್ಯವಹಾರವನ್ನು ರಚನಾತ್ಮಕ ರೀತಿಯಲ್ಲಿ ಬೆಳೆಸಲು ಅನುಕೂಲವಾಗುವಂತೆ ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅಭಿಷೇಕ್ ಹೇಳಿದರು.
ಈ ನೀತಿ ಭಾರತದಲ್ಲಿ ಚಿಲ್ಲರೆ ವ್ಯಾಪಾರವನ್ನು ಸುವ್ಯವಸ್ಥಿತಗೊಳಿಸುತ್ತದೆ ಮತ್ತು ವ್ಯಾಪಾರ ಮಾಡಲು ಸುಲಭವಾಗಿಸಲಿದೆ .ಭಾರತದಲ್ಲಿ ಚಿಲ್ಲರೆ ವ್ಯಾಪಾರವು ಸುಮಾರು 650 ಶತಕೋಟಿ ಡಾಲರ್, ದೇಶದಲ್ಲಿ ಸುಗಮ ವ್ಯಾಪಾರ ಚಟುವಟಿಕೆಗಳಿಗೆ ರಾಷ್ಟ್ರೀಯ ಚಿಲ್ಲರೆ ನೀತಿಯು ಹೆಚ್ಚು ಅಗತ್ಯವಾಗಿದೆ ಎಂದು ಅವರು ಹೇಳಿದರು.
SCROLL FOR NEXT