ವಾಣಿಜ್ಯ

ಜಿಎಸ್ ಟಿ ಸುಧಾರಣೆಗೆ ಸಜ್ಜಾದ ಕೇಂದ್ರ ಸರ್ಕಾರ: ತೆರಿಗೆ ಪದ್ಧತಿಯಲ್ಲಿ ಹೊಸ ಬದಲಾವಣೆಗಳ ಬಗ್ಗೆ ಇಲ್ಲಿದೆ ಮಾಹಿತಿ

Srinivas Rao BV
ಜಿಎಸ್ ಟಿ ಜಾರಿಯಾಗಿ ಜು.1 ಕ್ಕೆ ಎರಡು ವರ್ಷಗಳು ಪೂರ್ಣಗೊಳ್ಳಲಿದೆ. ಈ ಜು.1 ಕ್ಕೆ ಕೇಂದ್ರ ಸರ್ಕಾರ ಜಿಎಸ್ ಟಿಗೆ ಸಂಬಂಧಿಸಿದ ಒಂದಷ್ಟು ಸುಧಾರಣೆಗಳನ್ನು ಘೋಷಣೆ ಮಾಡಲಿದೆ. 
ರಿಟರ್ನ್ ಫೈಲಿಂಗ್ ವ್ಯವಸ್ಥೆ, ಕ್ಯಾಶ್ ಲೆಡ್ಜರ್ ವ್ಯವಸ್ಥೆ, ಒಂದೇ ಹಂತದಲ್ಲಿ  ಮರುಪಾವತಿ-ವಿತರಣಾ ಕಾರ್ಯವಿಧಾನ ಈ ಬಾರಿಯ ಸುಧಾರಣೆಗೆ ತೆರೆದುಕೊಳ್ಳಲಿರುವ ಮಹತ್ವದ ಅಂಶಗಳಾಗಿವೆ. ಉಳಿದಂತೆ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸುವ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ. 
ಜಿಎಸ್ ಟಿ ಜಾರಿಗೊಳಿಸಿದ ದಿನದಿಂದ ವಿಪಕ್ಷಗಳು ಜಿಎಸ್ ಟಿಯಲ್ಲಿನ ಸಂಕೀರ್ಣತೆಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದವು. 
ಜು.1 ಕ್ಕೆ ಹಣಕಾಸು ಇಲಾಖೆಯ ರಾಜ್ಯ ಸಚಿವರಾದ ಅನುರಾಗ್ ಠಾಕೂರ್ ಹಾಗೂ ಇಲಾಖೆಯ ಇನ್ನಿತರ ಕಾರ್ಯದರ್ಶಿಗಳು, ಉನ್ನತ ಅಧಿಕಾರಿಗಳು ಸುಧಾರಣೆಗಳನ್ನು ಘೋಷಣೆ ಮಾಡಲಿದ್ದಾರೆ. 
ಹೊಸ ರಿಟರ್ನ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜು.1 ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಿದ್ದು, ಅಕ್ಟೋಬರ್ ನಿಂದ ಕಡ್ಡಾಯವಾಗಿ ಜಾರಿಯಾಗಲಿದೆ. ಸಣ್ಣ ತೆರಿಗೆದಾರರಿಗೆ ಸಹಜ-ಸುಗಮ ತೆರಿಗೆ ಮರುಪಾವತಿ (ಟ್ಯಾಕ್ಸ್ ರಿಟರ್ನ್ಸ್) ಈ ಬಾರಿಯ ಸುಧಾರಣೆಗಳ ಪಟ್ಟಿಯಲ್ಲಿರುವ ವಿಶೇಷ ಅಂಶವಾಗಿದೆ. 
SCROLL FOR NEXT