ವಾಣಿಜ್ಯ

ವಿಡಿಯೋಕಾನ್ ಸಾಲ ಪ್ರಕರಣ: ಇಡಿ ಕಛೇರಿಗೆ ಹಾಜರಾದ ಚಂದಾ ಕೋಚಾರ್

Raghavendra Adiga
ಮುಂಬೈ: ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿ ಐಸಿಐಸಿಐ  ಬ್ಯಾಂಕ್ ಮಾಜಿ ಸಿಇಒ ಚಂದಾ ಕೋಚಾರ್ ಹಾಗೂ ಅವರ ಪತಿ ದೀಪಕ್ ಕೋಚಾರ್ ಶನಿವಾರ ತಮ್ಮ ಮೇಲಿನ ಆರೋಪದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಕಛೇರಿಗೆ ಆಗಮಿಸಿದ್ದಾರೆ.
ಶುಕ್ರವಾರವಷ್ಟೇ ಚಂದಾ ಕೋಚಾರ್ ಹಾಗೂ ವಿಡಿಯೋಕಾನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ಮನೆ, ಕಛೇರಿಗಳ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಕೋಚಾರ್ ದಂಪತಿ ಹಾಗೂ ಧೂತ್ ಅವರಿಗೆ ತನಿಖೆ ಎದುರಿಸಲು ಕಛೇರಿಗೆ ಆಗಮಿಸುವಂತೆ ಸೂಚಿಸಿದ್ದರು.
ಶುಕ್ರವಾರ ರಾತ್ರಿ 8  ಗಂಟೆಗಳವರೆಗೆ ಇಡಿ ಅಧಿಕಾರಿಗಳು ಕೋಚಾರ್ ಮನೆ ಶೋಧಕಾರ್ಯ ನಡೆಸಿದ್ದಾರೆ.  ಅಲ್ಲದೆ ಆಕೆಯನ್ನು ಕಛೇರಿಗೆ ಕರೆಸಿಕೊಂಡು ನಿನ್ನೆ ಸಂಜೆ  4:30ರವರೆಗೆ ಪ್ರಶ್ನಿಸಲಾಗಿದೆ. ಇನ್ನು ವಿಡಿಯೋಕಾನ್ ಸಂಸ್ಥೆಯ ಧೂತ್ ಅವರನ್ನು ಸಹ ರಾತ್ರಿ 11 ಗಂಟೆ ವರೆಗೆ ಪ್ರಶ್ನಿಸಿದ್ದಾರೆ ಎಂದು ಇಡಿ ಮೂಲಗಳು ಹೇಳಿದೆ. ಸಿಬಿಐ ಇದಾಗಲೇ ಕೋಚಾರ್ ಅವರಿಗಾಗಿಲುಕೌಟ್ ನೋಟೀಸ್ ಜಾರಿ ಮಾಡಿದೆ. ಈ ಮೂಲಕ ದೇಶದ ಯಾವುದೇ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಸೇರಿ ಎಲ್ಲೆಡೆ ಕೋಚಾರ್ ಆಗಮನ ಹಾಗೂ ನಿರ್ಗಮನದ ಕುರಿತು ಎಚ್ಚರಿಕೆ ವಹಿಸಬೇಕೆಂದು ಆದೇಶಿಸಿದೆ.
ಚಂದಾ ಕೋಚಾರ್ ಐಸಿಐಸಿಐ ಬ್ಯಾಂಕ್ ಅಧ್ಯಕ್ಷೆಯಾಗಿದ್ದ ವೇಳೆ ಅವ್ಯವಹಾರ ನಡೆದಿದೆ ಎಂದು ಕಳೆದ ವರ್ಷ ಮಾರ್ಚ್ ನಲ್ಲಿ ಮೊದಲಿಗೆ ಆರೋಪ ಕೇಳಿಬಂದಿತ್ತು.ಇದೇ ಕಾರಣದಿಂದ ಅವರು ಕಳೆದ ಅಕ್ಟೋಬರ್ ನಲ್ಲಿ ಹುದ್ದೆಯಿಂದ ಕೆಳಗಿಳಿದಿದ್ದರು
SCROLL FOR NEXT