ವಾಣಿಜ್ಯ

ನೀರವ್ ಮೋದಿ ಕಲಾಕೃತಿಗಳ ಹರಾಜಿನಿಂದ 59.37 ಕೋಟಿ ರೂ. ಸಂಗ್ರಹ

Raghavendra Adiga
ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರು. ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ್ದ ಅಮೂಲ್ಯ ಕಲಾಕೃತಿಗಳ ಸಂಗ್ರಹವನ್ನು ಭಾರತ ಸರ್ಕಾರ ತನಿಖಾ ಸಂಸ್ಥೆಗಳು ಜಪ್ತಿ ಮಡಿದ್ದು ಇಂದು ಮುಂಬೈನಲ್ಲಿ ಇದನ್ನು ಹರಾಜಿಗೆ ಇಡಲಾಗಿತ್ತು. ಈ ವೇಳೆ ಹರಾಜಿನಲ್ಲಿ ಕಲಾಕೃತಿಗಳು ಒಟ್ಟು  59.37 ಕೋಟಿ ರೂ ಗೆ ಮಾರಾಟವಾಗಿದೆ.
ನೀರವ್ ಮೋದಿಯಿಂದ ವಶಪಡಿಸಿಕೊಂಡ ಕಲಾಕೃತಿಯ ಹೊರತಾಗಿ, ಹರಾಜಿನಲ್ಲಿ ಚೀನೀ ವರ್ಣಚಿತ್ರಗಳ  ಸಂಗ್ರಹವೂ ಸಹ ಸೇರಿತ್ತು. ಒಟ್ಟಾರೆಯಾಗಿ, ಆದಾಯ ತೆರಿಗೆ ಇಲಾಖೆಯ ತೆರಿಗೆ ಪುನರ್ ಪಾವತಿ ಅಧಿಕಾರಿಯ  ಪರವಾಗಿ ಮೋದಿಯ 68 ವರ್ಣಚಿತ್ರಗಳನ್ನು  ಹರಾಜು ಹಾಕಲಾಗಿದೆ.
ಕಳೆದ ವಾರ, ಮುಂಬೈಯ ವಿಶೇಷ ನ್ಯಾಯಾಲಯವು ಆದಾಯ ತೆರಿಗೆ ಇಲಾಖೆಗೆ ನೀರವ್ ಮೋದಿ ಸಂಗ್ರಹದಲ್ಲಿದ್ದ ವಿಶೇಷ ವರ್ಣಚಿತ್ರಗಳ ಹರಾಜನ್ನು ಕೈಗೊಳ್ಳಲು ಅವಕಾಶ ನೀಡಿತು ವಜ್ರದ ವ್ಯಾಪಾರಿಯಾಗಿದ್ದ ನೀರವ್ ಮೋದಿ ಪಿಎನ್ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಜಾರಿ ನಿರ್ದೇಶನಾಲಯ ಅವರಿಂದ ವಶಕ್ಕೆ ಪಡೆಇದ್ದ ಈ ವರ್ಣಚಿತ್ರಗಳನ್ನು ಹರಾಜು ಮಾಡಲು ಇಲಾಖೆಯು ನ್ಯಾಯಾಲಯದ ಅನುಮತಿ  ಕೇಳಿದ್ದು ಅನುಮತಿ ಸಿಕ್ಕ ಬಳಿಕ ಈ ಹರಾಜು ನಡೆದಿದೆ.
ನೀರವ್ ಮೋದಿಯನ್ನು ಲಂಡನ್ ನಲ್ಲಿ ಕಳೆದ ವಾರವಷ್ಟೇ ಬಂಧಿಸಿದ್ದು ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಮತ್ತು ಮುಂದಿನ ವಿಚಾರಣೆ ಮಾರ್ಚ್ ೨೯ಕ್ಕೆ ನಿಗದಿಯಾಗಿದ್ದು ಲಂಡನ್ ಕಾರಾಗೃಹದಲ್ಲಿ ಮೋದಿ ಬಂಧಿಯಾಗಿದ್ದಾರೆ.
SCROLL FOR NEXT