ವಾಣಿಜ್ಯ

ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲಿಯೇ ಅತ್ಯಧಿಕ: ಕೊನೆಗೂ ಒಪ್ಪಿಕೊಂಡ ಕೇಂದ್ರ

Lingaraj Badiger
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಸರ್ಕಾರ ಗರಿಷ್ಠ ಮೌಲ್ಯದ ನೋಟುಗಳನ್ನು ನಿಷೇಧಿಸಿದ ನಂತರ ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ದಾಖಲಾಗಿದೆ ಎಂಬ ಸತ್ಯವನ್ನು ಕೊನೆಗೂ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
2017-18ನೇ ಹಣಕಾಸು ವರ್ಷದಲ್ಲಿ ನಿರುದ್ಯೋಗ ಪ್ರಮಾಣವು ಶೇ.6.01ಕ್ಕೆ ಏರಿದೆ ಎಂದು ಅಂಕಿ ಅಂಶಗಳ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದೇ ಅಂಕಿ ಅಂಶ ಜನವರಿಯಲ್ಲಿ ಪತ್ರಿಕೆಯೊಂದಕ್ಕೆ ಸೋರಿಕೆಯಾಗಿತ್ತು. ಆದರೆ ಆಗ ಕೇಂದ್ರ ಸರ್ಕಾರವು ಅಂಕಿ ಅಂಶವನ್ನು ಅಲ್ಲಗಳೆದಿತ್ತು. ಈಗ 1972-73 ರ ನಂತರ ನಿರುದ್ಯೋಗವು 45 ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ ಎಂದು ಸರ್ಕಾರ ತನ್ನ ವರದಿಯಲ್ಲಿ ಅಧಿಕೃತವಾಗಿ ತಿಳಿಸಿದೆ.
ಕಾರ್ಮಿಕ ಸಚಿವಾಲಯದ ಪ್ರಕಾರ ನಗರದ ಎಲ್ಲಾ ಉದ್ಯೋಗಶೀಲ ಯುವಕರಲ್ಲಿ 7.8 ರಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಗ್ರಾಮೀಣ ಭಾಗದಲ್ಲಿ ಇದರ ಪ್ರಮಾಣ  ಶೇಕಡ 5.3 ರಷ್ಟು ಹೊಂದಿದೆ. 
ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಶೇಕಡಾ 6.2 ರಷ್ಟಿದ್ದರೆ, ಮಹಿಳೆಯರಲ್ಲಿ 5.7 ಶೇ. ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನೊಂದೆಡೆಗೆ ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಭಾರತದ ಆರ್ಥಿಕ ಬೆಳವಣಿಗೆ ದರವು ಜನವರಿ-ಮಾರ್ಚ್ 2018-19ರಲ್ಲಿ ರಲ್ಲಿ 5.8 ರಷ್ಟು ಇಳಿಮುಖವಾಗುವುದರ ಮೂಲಕ ಕಳೆದ ಐದು ವರ್ಷಗಳಲ್ಲಿ ಅತಿ ಕನಿಷ್ಠ  ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
1972-73ರಲ್ಲಿ ನಿರುದ್ಯೋಗ ದರ ಹೆಚ್ಚಿತ್ತು. ಆದಾದ ಬಳಿಕ ಈಗಲೇ ಇಷ್ಟು ಪ್ರಮಾಣದ ಸಂಖ್ಯೆ ಹೆಚ್ಚಿದೆ.  2011-12ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನಿರುದ್ಯೋಗದ ಸಂಖ್ಯೆ ಕೇವಲ 2.2ರಷ್ಟು ಮಾತ್ರ ಇತ್ತು ಎನ್ನಲಾಗಿದೆ.
SCROLL FOR NEXT