ವಾಣಿಜ್ಯ

ಮೊಬೈಲ್​ ರಿಂಗಿಂಗ್ ಅವಧಿಗೆ ಮಿತಿ ಹೇರಿದ ಟ್ರಾಯ್!

Raghavendra Adiga

ನವದೆಹಲಿ: ಇನ್ನು ನೀವು ನಿಮಗೆ ಬಂದ ಮೊಬೈಲ್ ಕರೆಗಳನ್ನು ರಿಸೀವ್ ಮಾಡಿ ಇಲ್ಲವೇ ಬಿಡಿ ನಿಮ್ಮ ಮೊಬೈಲ್ ಕೇವಲ 30 ಸೆಕೆಂಡ್ ಗಳಷ್ಟೇ ರಿಂಗಣಿಸಲಿದೆ! ಹೌದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್‌) ಶುಕ್ರವಾರ ಹೊಸ ಆದೇಶವೊಂದನ್ನು ಹೊರಡಿಸಿದ್ದು ಇದರ ಪ್ರಕಾರ ಮೊಬೈಲ್‌ ಕರೆಗಳ ರಿಂಗಿಂಗ್ ಅವದಿಯನ್ನು 30 ಸೆಕೆಂಡ್ ಹಾಗೂ ಲ್ಯಾಂಡ್ ಲೈನ್ ಫೋನ್ ಗಳ ರಿಂಗಿಂಗ್ ಅವಧಿಯನ್ನು 60 ಸೆಕೆಂಡ್ ಗೆ ನಿಗದಿ ಮಾಡಿದೆ.

ಇದುವರೆಗೆ ದೇಶದಲ್ಲಿ ಇಂತಹಾ ನಿಯಮಾವಳಿ ಜಾರಿಯಲ್ಲಿರಲಿಲ್ಲ. ಎಲ್ಲರ ಮೊಬೈಲ್ ಗಳು ಅವರವರ ನ್ಗದಿತ ಕಾಲಾವಧಿಯ ರಿಂಗಿಂಗ್ ಅನ್ನು ಅಳವಡಿಸಿಕೊಂಡಿದ್ದವು. ಆದರೆ ಇನ್ನು ಮುಂದೆ ಇದು ಹಾಗಿರಲಾರದು.

ಒಳಬರುವ ಕರೆಗಳ (ಇನ್ ಕಮಿಂಗ್ ಕಾಲ್) ರಿಂಗಿಂಗ್ ಸಮಯವನ್ನು ಸೀಮಿತಗೊಳಿಸುವ ನಿಯಮ ಜಾರಿಯಿಂದ ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಗ್ರಾಹಕ ಸೇವೆಗಳ ಗುಣಮಟ್ಟ ಸುಧಾರಿಸಲಿದೆ ಎಂದು ಟ್ರಾಯ್ ಹೇಳಿಕೆಯಲ್ಲಿ ತಿಳಿಸಿದೆ.

ಈ ಹೊಸ ನಿಯಮಾವಳಿ ಇನ್ನು ಹದಿನೈದು ದಿನಗಳ ಬಳಿಕ ಜಾರಿಯಾಗಲಿದೆ.

ಇನ್ನು ಈ ರಿಂಗಿಂಗ್ ಅವಧಿಯ ಕುರಿತು ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ನಡುವೆ ಜಟಾಪಟಿ ನಡೆದಿತ್ತು. ಒಳಬರುವ ಕರೆಗಳ ರಿಂಗಿಂಗ್ ಅವಧಿ ನಲವತ್ತೈದು ಸೆಕೆಂಡ್ ಗಳಿರಬೇಕು ಆಗ ಗ್ರಾಹಕರಿಗೆ ಇತರೆ ನೆಟ್ ವರ್ಕ್ ಕರೆಗಳನ್ನು ಸ್ವೀಕರಿಸಲು ಸುಲಭವಾಗಲ್ದೆ ಎಂದಿ ಏರ್ ಟೆಲ್ ವಾದಿಸಿದ್ದರೆ ಜಿಯೋ ಇದನ್ನು ಇಪ್ಪತ್ತರಿಂದ ಇಪ್ಪತ್ತೈದು ಸೆಕೆಂಡ್ ಗೆ ಇಳಿಸಬೇಕೆಂದು ಮನವಿ ಮಾಡಿತ್ತು. ಇದೀಗ ಟ್ರಾಯ್ ಹೊಸ ನಿಯಮ ಇವರಿಬ್ಬರ ಜಟಾಪಟಿಗೆ ಬ್ರೇಕ್ ಹಾಕಿದೆ.

SCROLL FOR NEXT