ವಾಣಿಜ್ಯ

ಈ ಬಾರಿ ಪರಿಸರಸ್ನೇಹಿ ದೀಪಾವಳಿ! ಹಸಿರು ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ

Raghavendra Adiga

ಶೇಕಡಾ 30 ರಷ್ಟು ಕಡಿಮೆ ಮಾಲಿನ್ಯದೊಂದಿಗೆ ಹಸಿರು ಪಟಾಕಿಗಳು ಈಗ ಮಾರುಕಟ್ಟೆ ಪ್ರವೇಶಿಸಿವೆ ಎಂದು  ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶನಿವಾರ ಪ್ರಕಟಿಸಿದರು, ಪರಿಸರಕ್ಕೆ ಹಾನಿಯಾಗದಂತೆ ಜನರ ಭಾವನೆಗಳಿಗೂ ನೋವಾಗದಂತೆ ಈ ಉಪಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅವರು ಹೇಳಿದ್ದಾರೆ. 

ಹಸಿರು ಪಟಾಕಿಗಳನ್ನು ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ನ ವಿಜ್ಞಾನಿಗಳು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶಿಸಲಾಗಿದೆ. ಮಾಲಿನ್ಯದ ಭೀತಿಯನ್ನು ಎದುರಿಸಲು ಹೊಸ ಮತ್ತು ಸುಧಾರಿತ ಹಸಿರು ಪಟಾಕಿಒ ಪರಿಚಯಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು.

:ಕನಿಷ್ಟ  30 ಪ್ರತಿಶತದಷ್ಟು ಕಡಿಮೆ ಮಾಲಿನ್ಯವಾಗುವ  ಹಸಿರು ಪಟಾಕಿಗಳನ್ನು ಹೊಂದಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇವು ಪರಿಸರ ಸ್ನೇಹಿ. ಮಾಲಿನ್ಯಕಾರಕ ಪಟಾಕಿಗಳಿಗೆ ಪರ್ಯಾಯವಾಗಿ ಬರಬೇಕೆಂದು ನಾವು ನಮ್ಮ ವಿಜ್ಞಾನಿಗಳಿಗೆ ಮನವಿ ಮಾಡಿದ್ದೇವೆ ಇದರಿಂದ ಜನರ ಮನೋಭಾವಕ್ಕೂ ನೋವಾಗಬಾರದು " ಸಚಿವರು ಹೇಳಿದ್ದಾರೆ.

ಇನ್ನು ಬದಲಾದ ಸಂಯೋಜನೆಯಿಂದಾಗಿ ಕಡಿಮೆ ವೆಚ್ಚದಲ್ಲಿ ಹಸಿರು ಪಟಾಕಿಗಳು ಮಾರುಕಟ್ತೆಯಲ್ಲಿ ಲಭ್ಯವಿದೆ ಎಂದು ವಿಜ್ಞಾನಿಗಳು ಭರವಸೆ ಕೊಟ್ಟಿದ್ದಾರೆ."ಹಸಿರು ಪಟಾಕಿಗಳು ಅಗ್ಗದ ಬೆಲೆಗೆ ಲಭ್ಯವಿರುತ್ತದೆ. ಇದು ಈಗಿರುವ ಬೆಲೆಗಳಿಗಿಂತ ಹೆಚ್ಚಾಗುವುದಿಲ್ಲ. ರಾಸಾಯನಿಕಗಳ ಸಂಯೋಜನೆಯು ಬದಲಾಗಿದೆ, ಅದು ಅವುಗಳ ವೆಚ್ಚವನ್ನು ಕಡಿಮೆ ಮಾಡಿದೆ" ಎಂದು ಸಿಎಸ್ಐಆರ್ ಮುಖ್ಯ ವಿಜ್ಞಾನಿ ಮತ್ತು ಪರಿಸರ ಸಾಮಗ್ರಿಗಳ ವಿಭಾಗದ ಮುಖ್ಯಸ್ಥ ಸಾಧನಾ ರಾಯಲು ಹೇಳಿದರು

ಆದಾಗ್ಯೂ, ವಿಜ್ಞಾನಿಗಳು ಹೊಸ ಪಟಾಕಿಗಳ  ನಿಖರವಾದ ಬೆಲೆಯನ್ನು ಬಹಿರಂಗಪಡಿಸಲಿಲ್ಲ. 2018 ರಲ್ಲಿ, ದೀಪಾವಳಿಗೆ ಸ್ವಲ್ಪ ಮುಂಚೆ, ಮಾಲಿನ್ಯಕಾರಕ ಪಟಾಕಿ ತಯಾರಿಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತ್ತು ಮತ್ತು ಮಾಲಿನ್ಯ ಮಟ್ಟವನ್ನು ನಿಯಂತ್ರಿಸುವ ಸಲುವಾಗಿ ಕಡಿಮೆ ಮಾಲಿನ್ಯಕಾರಕ ಹಸಿರು ಪಟಾಕಿಗಳನ್ನು ಮಾತ್ರ  ದೇಶದಲ್ಲಿ ಮಾರಾಟ ಮಾಡಲು ಅನುಮತಿಸಲಾಗುವುದು ಎಂದು ತೀರ್ಪು ನೀಡಿತ್ತು.

SCROLL FOR NEXT