ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಹೆಚ್ ಎಸ್ ಬಿಸಿ ಬ್ಯಾಂಕಿನಿಂದ ಸದ್ಯದಲ್ಲಿಯೇ 10 ಸಾವಿರ ಸಿಬ್ಬಂದಿ ವಜಾ: ಇಂಗ್ಲಿಷ್ ದೈನಿಕ ವರದಿ

ಹೆಚ್ ಎಸ್ ಬಿಸಿ ಬ್ಯಾಂಕಿಂಗ್ ಸಂಸ್ಥೆ 10 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತ ಕಂಡುಬಂದ ಹಿನ್ನಲೆಯಲ್ಲಿ, ಸಂಸ್ಥೆ ನಷ್ಟದತ್ತ ಸಾಗುತ್ತಿದೆ ಎಂದು ಈ ಕ್ರಮಕ್ಕೆ ಮುಂದಾಗಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.

ಹೆಚ್ ಎಸ್ ಬಿಸಿ ಚಿಹ್ನೆ(ಸಂಗ್ರಹ ಚಿತ್ರ)
Sumana Upadhyaya
Updated On : 7 Oct 2019, 12:30 pm

ಹಾಂಕಾಂಗ್: ಹೆಚ್ ಎಸ್ ಬಿಸಿ ಬ್ಯಾಂಕಿಂಗ್ ಸಂಸ್ಥೆ 10 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ವರದಿಯೊಂದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತ ಕಂಡುಬಂದ ಹಿನ್ನಲೆಯಲ್ಲಿ, ಸಂಸ್ಥೆ ನಷ್ಟದತ್ತ ಸಾಗುತ್ತಿದೆ ಎಂದು ಈ ಕ್ರಮಕ್ಕೆ ಮುಂದಾಗಿದೆ ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ. 


ಕುಸಿಯುತ್ತಿರುವ ಬಡ್ಡಿದರ, ದೀರ್ಘಾವಧಿಯಿಂದ ನಡೆಯುತ್ತಿರುವ ವ್ಯಾಪಾರ ಕದನ, ಬ್ರೆಕ್ಸಿಟ್, ವಿಪರೀತ ಖರ್ಚು ವೆಚ್ಚವನ್ನು ತಗ್ಗಿಸಲು ಉನ್ನತ ವೇತನ ಶ್ರೇಣಿ ಹೊಂದಿರುವವರಲ್ಲಿ ಹಲವರನ್ನು ವಜಾಗೊಳಿಸುವ ನಿರ್ಧಾರಕ್ಕೆ ಸಂಸ್ಥೆ ಬಂದಿದೆ ಎಂದು ವರದಿ ಹೇಳಿದೆ.
ಯುರೋಪ್ ನಲ್ಲಿ ಸಂಸ್ಥೆಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಳವಾಗಿದ್ದು ಏಷ್ಯಾದ ಕೆಲವು ಭಾಗಗಳಲ್ಲಿ ಬ್ಯಾಂಕಿನ ಆದಾಯ ಇಳಿಮುಖವಾಗುತ್ತಿದೆ ಎಂದು ಹೇಳಿದೆ.


ಲಂಡನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹೆಚ್ ಎಸ್ ಬಿಸಿ ಬ್ಯಾಂಕಿನ ಸಿಇಒ ಜಾನ್ ಫ್ಲಿಂಟ್ ಅವರು ಅಧಿಕಾರ ವಹಿಸಿ ಕೇವಲ 18 ತಿಂಗಳಲ್ಲಿ ಹುದ್ದೆ ತೊರೆಯುವ ಮೂಲಕ ಅಚ್ಚರಿಯನ್ನುಂಟುಮಾಡಿದ್ದರು. ಅವರ ರಾಜೀನಾಮೆಗೆ ಏನು ಕಾರಣ ಎಂದು ಹೇಳಲಿಲ್ಲ ಎಂದು ಸಂಸ್ಥೆ ನಂತರ ಪ್ರಕಟಣೆ ಹೊರಡಿಸಿತ್ತು. ಇದೇ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಸುಮಾರು 4 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರವನ್ನು ಕೂಡ ಬಹಿರಂಗಪಡಿಸಿತ್ತು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments