ವಾಣಿಜ್ಯ

ಹೂಡಿಕೆ ಮಾಡಿ 172 ಕೋಟಿ ರೂ. ನಷ್ಟ ಮಾಡಿಕೊಂಡ ವಾಲ್ಮಾರ್ಟ್ ಇಂಡಿಯಾ 

Sumana Upadhyaya

ನವದೆಹಲಿ: ಕಂಪೆನಿಯನ್ನು ವಿಸ್ತರಣೆ ಮಾಡುವ ಅತೀವ ಆಕಾಂಕ್ಷೆಯಲ್ಲಿ ವಾಲ್ ಮಾರ್ಟ್ ಇಂಡಿಯಾ 2018-19ನೇ ಹಣಕಾಸು ವರ್ಷದಲ್ಲಿ ಭಾರೀ ನಷ್ಟ ಮಾಡಿಕೊಂಡಿದೆ.


ಅಂಕಿಅಂಶ ಸಂಶೋಧನೆ ನಡೆಸುವ ಟೊಫ್ಲರ್ ಪ್ರಕಾರ, ಅಮೆರಿಕಾ ಮೂಲದ ಕಂಪೆನಿಯ ಭಾರತೀಯ ಘಟಕಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ 172 ಕೋಟಿ ರೂಪಾಯಿ ನಷ್ಟವಾಗಿದೆ, ಈ ಮೊತ್ತ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ ಎಂದು ಹೇಳಿದೆ.


ವಾಲ್ ಮಾರ್ಟ್ ಇಂಡಿಯಾ ಭಾರತದಲ್ಲಿ ಎರಡು ಡಜನ್ ಗೂ ಅಧಿಕ ಬಿ2ಬಿ ಮಳಿಗೆಗಳನ್ನು ಹೊಂದಿದೆ. ಕಂಪೆನಿಗೆ ತೀವ್ರ ನಷ್ಟವಾಗಿರುವುದು ಅದು ಮುಂದಿನ ದಿನಗಳಲ್ಲಿ ಭಾರತದಲ್ಲಿ ಹೂಡಿಕೆ ಮಾಡುವುದರ ಮೇಲೆ ಪರಿಣಾಮ ಬೀರಲಿದೆ. ನಮ್ಮ ಸಂಪನ್ಮೂಲಗಳನ್ನು ಬಳಸಿ ಜನರ ಅಭಿವೃದ್ಧಿಯಲ್ಲಿ ನಮ್ಮ ತಂತ್ರಜ್ಞಾನ ಮೂಲಸೌಕರ್ಯವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಮುಂದುವರಿಸುತ್ತೇವೆ ಎಂದು ಕಂಪೆನಿ ಹೇಳಿದೆ.


ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಕಂಪೆನಿಯ ಒಟ್ಟು ಆದಾಯ ಜಾಸ್ತಿಯಾಗಿದೆ. ಕಳೆದ ವರ್ಷ 3,686 ಕೋಟಿ ಆಗಿದ್ದರೆ ಈ ವರ್ಷ 4 ಸಾವಿರದ 095 ಕೋಟಿ ರೂಪಾಯಿಗಳಾಗಿದೆ. ಅದರ ಕಾರ್ಯನಿರ್ವಹಣೆ ನಷ್ಟ ಕೂಡ ಈ ವರ್ಷ 146.4 ಕೋಟಿಯಾಗಿದ್ದು ಕಳೆದ ವರ್ಷ 64.3 ಕೋಟಿಯಾಗಿತ್ತು. ಕಳೆದ ವರ್ಷ ಕಂಪೆನಿ ಲಕ್ನೊ ಮತ್ತು ಹೈದರಾಬಾದ್ ನಲ್ಲಿ ಎರಡು ನೆರವೇರಿಕೆ ಕೇಂದ್ರಗಳನ್ನು ಸ್ಥಾಪಿಸಿತ್ತು. 


2022ರ ವೇಳೆಗೆ ಕಂಪೆನಿ ಸುಮಾರು 500 ಮಿಲಿಯನ್ ಡಾಲರ್ ಹಣವನ್ನು ಇನ್ನೂ 47 ಮಳಿಗೆಗಳನ್ನು ತೆರೆಯುವ ಮೂಲಕ ಖರ್ಚು ಮಾಡಲು ಯೋಜಿಸುತ್ತಿದೆ ಎಂದು ಹೇಳಿತ್ತು.

SCROLL FOR NEXT