ವಾಣಿಜ್ಯ

ಅಮೇಜಾನ್ ಗೆ 4 ದಶಲಕ್ಷ ಯೂರೋ ದಂಡ ವಿಧಿಸಿದ ಫ್ರಾನ್ಸ್ ನ್ಯಾಯಾಲಯ

Nagaraja AB

ಪ್ಯಾರಿಸ್:  ಪಾಲುದಾರ ಸಂಸ್ಥೆಯೊಂದಿಗಿನ ಒಪ್ಪಂದದಲ್ಲಿ ನಿಂದನೀಯ ಷರತ್ತುಗಳನ್ನು ವಿಧಿಸಿದ ಆರೋಪಕ್ಕೆ ಸಂಬಂಧಿಸಿದಂತೆ  ದೈತ್ಯ ಆನ್ ಲೈನ್ ಮಾರಾಟ ಸಂಸ್ಥೆ ಅಮೇಜಾನ್ ಗೆ ಫ್ರಾನ್ಸ್ ನ ವಾಣಿಜ್ಯ ನ್ಯಾಯಾಲಯ 4 ದಶಲಕ್ಷ ಯುರೋ ದಂಡ ವಿಧಿಸಿದೆ.

ಗ್ರಾಹಕರ ವಿಚಾರಣಾ ಸಮಿತಿಯಾದ ಡಿಜಿಸಿಸಿಆರ್ ಎಫ್ ಎರಡು ವರ್ಷಗಳ ಕಾಲ ತನಿಖೆ ನಡೆಸಿ ನೀಡಿದ ವರದಿ ಆಧರಿಸಿ ನ್ಯಾಯಾಲಯ, ಈ ಭಾರಿ ಮೊತ್ತದ ದಂಡ ವಿಧಿಸಿದೆ.

ಪಾಲುದಾರ ಸಂಸ್ಥೆಗೆ 12 ಕ್ಕೂ ಹೆಚ್ಚು ಅನವಶ್ಯಕ ಹಾಗೂ ಅಸಮಾತೋಲಿತ ಷರತ್ತುಗಳನ್ನು ವಿಧಿಸಿದ್ದರಿಂದ ಆ ಸಂಸ್ಥೆ ಅದನ್ನು ಫಾಲಿಸಿಲ್ಲ.  ಈ ಷರತ್ತುಗಳು ಯಾವುದೇ ವಾಣಿಜ್ಯ ಷರತ್ತುಗಳಿಗೆ ಬದ್ಧವಾಗಿರಲಿಲ್ಲ. ಯಾವುದೇ ವಿವರಣೆಗೂ ಕೂಡಾ ಯೋಗ್ಯವಾಗಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದು ಇಂತಹ ಪ್ರಕರಣದಲ್ಲಿ ವಿಧಿಸಿದ ಅತಿ ದೊಡ್ಡ ಮೊತ್ತದ ದಂಡವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

SCROLL FOR NEXT