ವಾಣಿಜ್ಯ

ಕಳೆದ ಎರಡೂವರೆ ತಿಂಗಳಲ್ಲಿ ಎಲ್ ಐಸಿಗೆ 57 ಸಾವಿರ ಕೋಟಿ ನಷ್ಟ- ಪ್ರಿಯಾಂಕಾ ಪ್ರಶ್ನೆ

Nagaraja AB

ನವದೆಹಲಿ: ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ಮುಂದುವರೆಸಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದ್ದಾರೆ.

ಕಳೆದ ಎರಡೂವರೆ ತಿಂಗಳಲ್ಲಿ ಭಾರತೀಯ ಜೀವ ವಿಮಾ ನಿಗಮ 57 ಸಾವಿರ ಕೋಟಿ ರೂ. ನಷ್ಟ ಹೊಂದಿದ್ದು, ಜನರು ಈ ಸಂಸ್ಥೆ ಮೇಲೆ ಇಟ್ಟಿದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.ಶ್ರಮಪಟ್ಟು ಗಳಿಸಿದ ಆದಾಯವನ್ನು ಇದರಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಅವರು ಹೇಳಿದ್ಗಾರೆ.

ಜನಸಾಮಾನ್ಯರು ತಮ್ಮ ಉತ್ತಮ ಭವಿಷ್ಯಕ್ಕಾಗಿ ಶ್ರಮಪಟ್ಟು ಎಲ್ ಐಸಿಯಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಎಲ್ ಐಸಿ ರೀತಿಯ ಕಂಪನಿಗಳನ್ನು ನಷ್ಟದ ಅಂಚಿಗೆ ತಳ್ಳುವ ಮೂಲಕ ಜನರ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಇದು ಯಾವ ರೀತಿಯ ನೀತಿಯದ್ದಾಗಿದೆ. ಇದು ಕೇವಲ ನಷ್ಟದ ನೀತಿಯೆ?ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ 4, 557 ಹಾಗೂ ಎಲ್ ಐಸಿಗೆ 4743 ಕೋಟಿ ರೂ. ಬಂಡವಾಳ ಆದ್ಯತಾ ಪ್ರಸ್ತಾವಕ್ಕೆ ಐಡಿಬಿಐ ಬ್ಯಾಂಕಿನ ನಿರ್ದೇಶಕರುಗಳ ಮಂಡಳಿ ಗುರುವಾರ ಅನುಮೋದನೆ ನೀಡಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ, ಸರ್ಕಾರದ ನೀತಿಗಳನ್ನು ಪ್ರಶ್ನಿಸಿದ್ದಾರೆ.

SCROLL FOR NEXT