ವಾಣಿಜ್ಯ

ಎಸ್‌ಬಿಐನಿಂದ ಸಿಹಿ ಸುದ್ಧಿ: ಕಡಿಮೆ ಬಡ್ಡಿದರದಲ್ಲಿ ಸಾಲ

Vishwanath S

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ರೆಪೋ ದರದ ಆಧಾರದಲ್ಲಿ ಗೃಹ ಸಾಲ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಉದ್ದೇಶಿಸಿದ್ದು ಈ ಮೂಲಕ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. 

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಎಸ್‌ಬಿಐ ಎಂಎಸ್ಎಂಇ, ಗೃಹ ಮತ್ತಿ ರಿಟೇಲ್ ಸಾಲ ಸೇರಿದಂತೆ ಎಲ್ಲ ಫ್ಲೋಟಿಂಗ್ ರೇಟ್ ಸಾಲಗಳ ರೆಪೋ ದರವನ್ನು ಬಾಹ್ಯ ಮಾನದಂಡವಾಗಿಸಲು ನಿರ್ಧರಿಸಿದ್ದು ಈ ನೂತನ ಬಡ್ಡಿ ದರ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.

ದೀಪಾವಳಿಗೂ ಮುನ್ನ ಎಸ್‌ಬಿಐನ ಈ ಹೊಸ ದರ ಜಾರಿಗೆ ಬರಲಿದೆ. ಇದರಿಂದ ಅಕ್ಟೋಬರ್ ರಿಂದ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ಎಷ್ಟು ಪ್ರಮಾಣದಲ್ಲಿ ಇಳಿಕೆಯಾಗಬಹುದು, ಇಎಂಐ ಎಷ್ಟು ತಗ್ಗಬಹುದು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. 

ಸೆಪ್ಟೆಂಬರ್ 1ರಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ರೆಪೋ ದರವನ್ನು 35 ಮೂಲಾಂಶ ತಗ್ಗಿಸಿದ್ದರು. 

SCROLL FOR NEXT