ವಾಣಿಜ್ಯ

ಸರ್ಕಾರಿ ಸ್ವಾಮ್ಯದ 9 ಬ್ಯಾಂಕ್ ಗಳಿಗೆ ಬೀಗ: ಈ ಸುದ್ದಿ ಬಗ್ಗೆ ಆರ್ ಬಿಐ ನೀಡಿದ ಸ್ಪಷ್ಟನೆ ಹೀಗಿದೆ 

Srinivas Rao BV

ಸರ್ಕಾರಿ ಸ್ವಾಮ್ಯದ 9 ಬ್ಯಾಂಕ್ ಗಳಿಗೆ ಬೀಗ ಜಡಿಯಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು, ಈ ಬಗ್ಗೆ ಆರ್ ಬಿಐ ಸ್ಪಷ್ಟನೆ ನೀಡಿದೆ. 

ಆರ್ ಬಿಐ ಸರ್ಕಾರಿ ಸ್ವಾಮ್ಯದ 9 ಬ್ಯಾಂಕ್ ಗಳನ್ನು ಮುಚ್ಚುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಆರ್ ಬಿಐ ಟ್ವೀಟ್ ಮಾಡಿದೆ. 

ಹಣಕಾಸು ಇಲಾಖೆಯ ಕಾರ್ಯದರ್ಶಿ ರಾಜೀವ್ ಕುಮಾರ್ ಸಹ ಈ ವರದಿಗಳನ್ನು ತಳ್ಳಿಹಾಕಿದ್ದಾರೆ. ಯಾವುದೇ ಸರ್ಕಾರಿ ಬ್ಯಾಂಕ್ ಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. 
 

SCROLL FOR NEXT