ವಾಣಿಜ್ಯ

ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ಗ್ರಾಹಕರಿಗೆ ದಿನಕ್ಕೆ ಸಿಗಲಿದೆ 100 ರು. ಪರಿಹಾರ!

Vishwanath S

ನವದೆಹಲಿ: ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ಅಂತಹ ಗ್ರಾಹಕನಿಗೆ ಪರಿಹಾರವಾಗಿ ದಿನಕ್ಕೆ 100 ರುಪಾಯಿ ಸಿಗಲಿದೆ.

ಖಾತೆಯಿಂದ ಹಣ ಕಡಿತವಾಗಿದ್ದರೂ ಎಟಿಎಂನಲ್ಲಿ ಹಣ ಸಿಗದೆ ಇದ್ದರೆ ಅಂತಹ ಗ್ರಾಹಕನಿಗೆ ಪರಿಹಾರವಾಗಿ ದಿನಕ್ಕೆ 100 ರುಪಾಯಿ ನೀಡಬೇಕು ಎಂದು ಆರ್ಬಿಐ ಎಲ್ಲ ಬ್ಯಾಂಕುಗಳಿಗೆ ಎಚ್ಚರಿಕೆಯ ನಿರ್ದೇಶ ನೀಡಿದೆ.

ಇನ್ನುಂದೆ ಬ್ಯಾಂಕ್ ಗ್ರಾಹಕರು ಎಟಿಎಂನಲ್ಲಿ ಹಣ ಬರದಿದ್ದರೆ ಅಥವಾ ಕಡಿಮೆ ಬಂದರೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗೆ ತೆರಳಿ ಲಿಖಿತ ರೂಪದಲ್ಲಿ ದೂರು ನೀಡಬೇಕು. ದೂರು ತೆಗೆದುಕೊಂಡ ಬ್ಯಾಂಕ್ ಟರ್ನ್ ಅರೌಂಡ್ ಟೈಮ್ 5 ದಿನಗಳ ವಿನಾಯಿತಿಯೊಂದಿಗೆ ಆರು ದಿನಗಳ ಒಳಗೆ ದೂರುದಾರರ ಖಾತೆಗೆ ಹಣ ವರ್ಗಾಯಿಸಬೇಕು. ಒಂದು ವೇಳೆ ವಿಳಂಬವಾದರೆ ಪರಿಹಾರ ಮೊತ್ತವಾಗಿ ದಿನಕ್ಕೆ 100 ನೀಡಬೇಕು ಎಂದು ಸೂಚಿಸಿದೆ.

ಒಂದು ವೇಳೆ ಬ್ಯಾಂಕುಗಳು ಪರಿಹಾರ ಮೊತ್ತ ನೀಡಲು ಅಥವಾ ನಿಗದಿತ ಸಮಯದಲ್ಲಿ ಪರಿಹರಿಸಲು ವಿಫಲವಾದರೇ ಗ್ರಾಹಕರು ಆರ್ಬಿಐನ ಬ್ಯಾಂಕಿಂಗ್ ಓಂಬುಡ್ಸ್ ಮನ್ ಗೆ ದೂರು ನೀಡಬಹುದು. 

SCROLL FOR NEXT