ವಾಣಿಜ್ಯ

ಮತ್ತೆ ಆರ್ ಬಿಐ ಲಾಭಾಂಶಕ್ಕೆ ಕೈ ಹಾಕಿದ ಕೇಂದ್ರ ಸರ್ಕಾರ!

Srinivasamurthy VN

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕಿನಿಂದ ಹಣ ಪಡೆದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಮ್ಮೆ ಆರ್ ಬಿಐ ಲಾಭಾಂಶಕ್ಕೆ ಕೈ ಹಾಕಲು ಮುಂದಾಗಿದೆ.

ಈ ಕುರಿತಂತೆ ರಾಷ್ಟ್ರೀಯ ಆಂಗ್ಲ ದೈನಿಕವೊಂದು ವರದಿ ಮಾಡಿದ್ದು, ಹಣಕಾಸಿನ ಕೊರತೆ ನೀಗಿಸಲು ಕೇಂದ್ರ ವಿತ್ತ ಸಚಿವಾಲಯ ಆರ್ ಬಿಐ ನಿಂದ ಸುಮಾರು 30 ಸಾವಿರ ಕೋಟಿ ರೂಗಳನ್ನು ಪಡೆಯಲು ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. 2019-20ನೇ ಸಾಲಿನ ಜಿಡಿಪಿಯ ಶೇಕಡಾ 3.3 ರ ಹಣಕಾಸಿನ ಕೊರತೆಯ ಗುರಿಯನ್ನು ಪೂರೈಸಲು ಕೇಂದ್ರ ಸರ್ಕಾರವು ಹಣಕಾಸು ವರ್ಷದ ಅಂತ್ಯದ ವೇಳೆಗೆ ಆರ್‌ಬಿಐನಿಂದ ಸುಮಾರು 30,000 ಕೋಟಿ ರೂ.ಗಳ ಮಧ್ಯಂತರ ಲಾಭಾಂಶವನ್ನು ಪಡೆಯಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಈ ವಿಚಾರವಾಗಿ ಮಾಹಿತಿ ನೀಡಿರುವ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು, 'ಆದಾಯ ಸಂಗ್ರಹಣೆಯಲ್ಲಿನ ಕುಸಿತ ಮತ್ತು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಠ ಶೇಕಡಾ 5 ರಿಂದ ಬೆಳವಣಿಗೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಕಾರಣದಿಂದಾಗಿ ಸರ್ಕಾರದ ಹಣಕಾಸು ಒತ್ತಡಕ್ಕೆ ಒಳಗಾಗಿದೆ. 'ಅಗತ್ಯವಿದ್ದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ 25,000-30,000 ಕೋಟಿ ರೂ.ಗಳ ಮಧ್ಯಂತರ ಲಾಭಾಂಶಕ್ಕಾಗಿ ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ಗೆ ಮನವಿ ಮಾಡಬಹುದು. ಈ ಕುರಿತಂತೆ ಜನವರಿ ಆರಂಭದಲ್ಲಿ ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದ್ದಾರೆ.

ಕಳೆದ ತಿಂಗಳು ಗವರ್ನರ್ ಶಕ್ತಿ ದಾಸ್ ನೇತೃತ್ವದ ಆರ್‌ಬಿಐ ಕೇಂದ್ರ ಮಂಡಳಿಯು ಸರ್ಕಾರಕ್ಕೆ 1,76,051 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲು ಅನುಮತಿ ನೀಡಿತ್ತು. 

SCROLL FOR NEXT